More

    ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯ

    ದಾವಣಗೆರೆ: ಕಾಯಕಯೋಗಿ ನುಲಿಯ ಚಂದಯ್ಯ ಅವರು ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ಮತ್ತು ಅದರ ಪರಿಕಲ್ಪನೆಯ ಮಹತ್ವವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ತಮ್ಮ ವಚನಗಳಲ್ಲಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
     ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಕೊರಚ, ಕೊರಮ ಸಮಾಜದ ಸಹಯೋಗದಲ್ಲಿ ನಗರದ  ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಯಕಯೋಗಿ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು
     12ನೇ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತಹ ಕಾಲವಾಗಿದೆ. ಬಸವಣ್ಣ, ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಅವರ ಸಮಕಾಲೀನರಾದ ನುಲಿಯ ಚಂದಯ್ಯನವರು ಮಾದರಿ ಸಮಾಜದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುತ್ತಿರುವ ಶೋಷಣೆ, ಸಂಕಷ್ಟಗಳ ಬಗ್ಗೆ ವಿಮರ್ಶಿಸಿ ಸೂಕ್ತ ಪರಿಹಾರ ನೀಡಿದ್ದಾರೆ ಹೇಳಿದರು.
     ಯಾವುದೇ ವ್ಯಕ್ತಿ ತಾನು ಹುಟ್ಟಿದ ಮೇಲೆ ಇಷ್ಟವಾದ ಕೆಲಸ ಮಾಡಬೇಕು ಮತ್ತು ತಾನು ಮಾಡಿದ ಕಾಯಕಕ್ಕೆ ಅನುಗುಣವಾಗಿ ಹಣ  ಸಂಪಾದಿಸಬೇಕು, ಅತಿಯಾಸೆ ಮಾಡಬಾರದು ಎಂಬುದು ಅವರ ಧ್ಯೇಯವಾಗಿತ್ತು. ಅವರ ಆದರ್ಶ ಹಾಗೂ ಚಿಂತನೆ ಸಮಾಜದ ಎಲ್ಲ ವರ್ಗದ ಜನರು ಅಳವಡಿಸಿಕೊಳ್ಳಬೇಕು ಎಂದರು.
     ಜಿಲ್ಲಾ ಕೊರಚ ಸಮಾಜದ ಮುಖಂಡ ರಾಜು ಪಾಟೀಲ್ ಮಾತನಾಡಿ, ಸಮಾಜದ ಎಲ್ಲರೂ ಒಟ್ಟೂಗೂಡಿ ಜಯಂತಿ ಆಚರಿಸಬೇಕು. ಶರಣರ ಕಾಯಕಗಳ ಬಗ್ಗೆ ಯುವ ಜನರಿಗೆ ತಿಳಿಸುವಂತಾಗಬೇಕು ಎಂದರು.  
     ಜಿಪಂ ಉಪನಿರ್ದೇಶಕಿ ಶಾರದ ಗೌಡ್ರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕೊರಚ, ಕೊರಮ ಸಮಾಜದ ಮುಖಂಡರಾದ ಆನಂದಪ್ಪ, ಮಾರಪ್ಪ, ಕೆ.ಜಿ. ಮಂಜಪ್ಪ, ಸಂತೋಷ್ ಕುಮಾರ್ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts