ಪೊಸಡಿ ಗುಂಪೆ ನಿಸರ್ಗಧಾಮದಲ್ಲಿ ‘ಕವಿತಾ ಕೌತುಕ’

sahithya
Published on

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕವಿತಾ ಕೌತುಕ ಸರಣಿ ಕಾರ್ಯಕ್ರಮ ಉದ್ಘಾಟನೆ ಪೈವಳಿಕೆ ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ಇತ್ತೀಚೆಗೆ ನಡೆಯಿತು.

ನಿಸರ್ಗಧಾಮದ ಮಾಲಿಕ ಮಾಧವ ಸಮಾರಂಭ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.

ಕವಿಗಳಾದ ಕೆ.ಎ.ಎಂ.ಅನ್ಸಾರಿ, ಥೋಮಸ್ ಡಿಸೋಜ, ವನಜಾಕ್ಷಿ ಪಿ.ಚೆಂಬ್ರಕಾನ, ಸೌಮ್ಯ ಪ್ರವೀಣ್, ಹರ್ಷಿತ ಎಸ್.ಶಾಂತಿಮೂಲೆ, ವಿದ್ಯಾಶ್ರೀ ಜೆ. ಮೊದಲಾದವರು ಕವನವಾಚನ ಮಾಡಿದರು. ಪತ್ರಕರ್ತ ಜಾನ್ ಡಿಸೋಜ, ಧರ್ಮತ್ತಡ್ಕ ಗ್ರಂಥಾಲಯ ಅಧ್ಯಕ್ಷ ರವಿಲೋಚನ ಸಿ.ಎಚ್, ಕಸಾಪ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ, ಇಂದಿರಾ ರವಿ ಬೆಂಗಳೂರು, ಶ್ರೀಧರ ಕುಂಜತ್ತೂರು, ಮಾಲತಿ ಕಣ್ಣನ್, ರವೀಂದ್ರನಾಥ ಪಾವಲ್ಕೋಡಿ, ಚಂದ್ರಾವತಿ ದಾಮೋದರ, ಶ್ರೀರಾಮ ಭಟ್ ಪ್ರಶಸ್ತಿ ಪತ್ರ ವಿತರಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಸಮಾರೋಪ ಭಾಷಣ ಮಾಡಿದರು. ಬೆಂಗಳೂರು ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಪ್ರಮೀಳಾ ಮಾಧವ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net