ಶಾಲೆ-ಕಾಲೇಜು ಸಮಯಕ್ಕೆ ಬಸ್ ಸಂಚರಿಸಲಿ

Torana-hiredinni Bus
ಮಸ್ಕಿ ಡಿಪೋ ವ್ಯವಸ್ಥಾಪಕ ಆದಪ್ಪಗೆ ಮಲ್ಲದಗುಡ್ಡ, ತೋರಣದಿನ್ನಿ ಹಾಗೂ ಹಿರೇದಿನ್ನಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
Published on

ಕವಿತಾಳ: ಮಸ್ಕಿ ಮತ್ತು ಮಾನ್ವಿಗೆ ಶಾಲೆ-ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಮಸ್ಕಿ ಡಿಪೋ ವ್ಯವಸ್ಥಾಪಕ ಆದಪ್ಪಗೆ ಹಿರೇದಿನ್ನಿ, ತೋರಣದಿನ್ನಿ ಹಾಗೂ ಮಲ್ಲದಗುಡ್ಡ ಗ್ರಾಮಸ್ಥರು ಭಾನುವಾರ ಮನವಿ ಸಲ್ಲಿಸಿದರು.

ಶಾಲೆ-ಕಾಲೇಜು ಮುಗಿದ ಬಳಿಕ ವಿದ್ಯಾರ್ಥಿಗಳು ಊರಿಗೆ ಹಿಂದಿರುಗಲು ಬಸ್‌ಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಜೆ 4.30ಕ್ಕೆ ತೋರಣದಿನ್ನಿ, ಮಲ್ಲದಗುಡ್ಡ ಮಾರ್ಗವಾಗಿ ಮಸ್ಕಿಯಿಂದ ಮಾನ್ವಿಗೆ ಸಂಪರ್ಕಕಿಸುವ ಬಸ್ ಸಂಚಾರ ಆರಂಭಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net