ಮಿಂಚಿಪದವು ಕಾವೇರಿ ತೀರ್ಥೋತ್ಸವ ಸಭೆ

New Project (5)
Published on

ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ಕಾವೇರಿ ತೀರ್ಥೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಭೆಯನ್ನು ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು.

ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಮಧುಸೂಧನ ಆಯರ್ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ದಾಮೋದರ, ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ, ಚಂದ್ರಹಾಸ ಮಣಿಯಾಣಿ, ಸಾಮಾಜಿಕ ಧಾರ್ಮಿಕ ಮುಂದಾಳು ನಾರಾಯಣ ರೈ ಕಟ್ಟೆ, ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಅಡ್ಕ, ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಎಂ.ಎನ್., ನಿವೃತ್ತ ವಿಂಗ್ ಕವಾಂಡರ್ ದಾಮೋದರ ಮಣಿಯಾಣಿ ಬೆಂಗಳೂರು, ಉದ್ಯಮಿ ಕೃಷ್ಣ ಕಾಮತ್, ಅಶೋಕ ಪ್ರಭು, ಲಕ್ಷ್ಮೀನಾರಾಯಣ ರಾವ್ ಪಡುಮಲೆ ಮಂಗಳೂರು, ಕಾರಡ್ಕ ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಕಾರ್ಯದರ್ಶಿ ಜಯಕರ ಎಂ. ಮೊದಲಾದವರಿದ್ದರು. ನಾರಾಯಣ ಕೇಕಡ್ಕ ಸ್ವಾಗತಿಸಿದರು. ಮನೋಜ್ ಎಂ.ಸಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net