

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಹರಿಸುವುದು ನಿಲ್ಲಿಸಬೇಕು, ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಆಗ್ರಹಿಸಿ ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ನೈತಿಕ ಬೆಂಬಲ ನೀಡಲಾಗಿದೆ. ಇದರಿಂದಾಗಿ ಬಂದ್ ಪರಿಣಾಮ ಕಂಡು ಬರಲಿಲ್ಲ. ಬದಲಿಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ ಬಂದ್ ನಿಮಿತ್ತ ರೈತ, ಕನ್ನಡಪರ ಹೋರಾಟಗಾರರು, ಹೊಟೇಲ್ ಬೇಕರಿ ಮಾಲೀಕರು ಬೆಂಬಲಿಸಿದ್ದಾರೆ. ರೈತ ಸಂಘದ ಕಾರ್ಯಕರ್ತರು ನಗರದ ಕೇಂದ್ರ ಬಸ್ ನಿಲ್ದಾ ಮುಂದೆ ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಜನ ಜೀವನ ಮಾಮೂಲಿನಂತೆ ಕಂಡು ಬಂದಿತು. ಅಂಗಡಿ ಮುಂಗಟ್ಟುಗಳು ತೆರೆದಿದ್ದು ಎಂದಿನಂತೆ ವ್ಯಾಪಾರ ನಡೆದಿದೆ.
ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರ ಯಥಾಸ್ಥಿತಿ ಓಡಾಡುತ್ತೀವೆ. ಖಾಸಗಿ ವಾಹನ,ಅಟೋ ಸಂಚಾರಕ್ಕೂ ಸಮಸ್ಯೆ ಇಲ್ಲ. ಶಾಲಾ- ಕಾಲೇಜುಗಳು ನಡೆದಿವೆ.
ಜಿಲ್ಲೆಯ ಆಳಂದ, ಅಫಜಲಪುರ, ಜೇವರ್ಗಿ, ಯಡ್ರಾಮಿ, ಶಹಾಬಾದ, ಚಿತ್ತಾಪುರ, ಸೇಡಂ, ಚಿಂಚೋಳಿ, ಕಾಳಗಿ, ಕಮಲಾಪುರ ತಾಲೂಕುಗಳಲ್ಲಿ ಜನಜೀವನ ಎಂದಿನಂತೆ ಇದೆ. ಪ್ರಮುಖ ಪಟ್ಟಣಗಳು, ಹಳ್ಳಿಯಲ್ಲಿ ಕೆಲಸಗಳು ಮಾಮೂಲಿನಂತೆ ಇದೆ.
ಸರ್ಕಾರಿ ಕಚೇರಿಯಲ್ಲಿ ಎಂದಿನಂತೆ ಕರ್ತವ್ಯ ನಿರ್ವಹಣೆ ಮಾಡಲಿವೆ. ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.