ಕವನ ವಾಚನ ಸ್ಪರ್ಧೆ

B M Sri
Published on

ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನವು ಕೆ.ಮೋಹನ್ ದೇವ್ ಆಳ್ವ ಹಾಗೂ ಡಾ. ಎಂ.ಕೆ. ಶೈಲಜಾ ಆಳ್ವ ಸ್ಥಾಪಿಸಿರುವ ವಿವಿಧ ದತ್ತಿಗಳ ಆಶ್ರಯದಲ್ಲಿ ಕವನ ವಾಚನ ಸ್ಪರ್ಧೆ ಆಯೋಜಿಸಿದೆ.

ರಾಷ್ಟ್ರಕವಿ ಶ್ರೀ ಮಂಜೇಶ್ವರ ಗೋವಿಂದ ಪೈ ದತ್ತಿ, ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ದತ್ತಿ, ರೆವರೆಂಡ್ ಶ್ರೀ ಚೆನ್ನಪ್ಪ ದಾನಿ ಎಲ್ಲಪ್ಪ ಉತ್ತಂಗಿ ದತ್ತಿ ಹಾಗೂ ಶ್ರೀ ಕೃಷ್ಣಮೂರ್ತಿ ಪುರಾಣಿಕ ದತ್ತಿಗಳಡಿ ಸ್ಪರ್ಧೆ ನಡೆಯಲಿದೆ. 10 ರಿಂದ 16 ವರ್ಷದೊಳಗಿನವರು ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಲು ನ. 15ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಪರ್ಧೆಯು ನ.23ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಮೂವರು ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಪ್ರತಿಷ್ಠಾನವು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net