ಸಾಧನೆಗಾಗಿ ಪಾಲಕರನ್ನು ಪೂಜಿಸಿ

Untitled design (10)
ಕವಲೂರಿನಲ್ಲಿ ದಸ್ತಗೀರ ಮೆಹಬೂಬ ಸುಬಾನಿಯವರ ಉರುಸು ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯನ್ನು ಗುರುಗಳಾದ ಮುಸ್ತಫಾ ಖಾದ್ರಿ ಉದ್ಘಾಟಿಸಿದರು. ಯಲಬುರ್ಗಾದ ರಶೀದ ಅಹಮದ್ ಖಾಜಿ, ಈಶಪ್ಪ ಅಜ್ಜ, ಪ್ರಮುಖರಾದ ಶಾಹೀದ್, ಅನ್ವರ, ಮುತ್ತಣ್ಣ, ನಾಗರಾಜ, ದೇವಪ್ಪ, ಗುರುಬಸವರಾಜ, ಮಹಾಂತೇಶ ಇನ್ನಿತರರಿದ್ದರು.
Published on

ಅಳವಂಡಿ: ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಕೆಯಿಂದ ಸಮಯ ವ್ಯರ್ಥವಾಗಲಿದೆ ಎಂದು ಬೆಳಗಟ್ಟಿಯ ಗುರುಗಳಾದ ಮುಸ್ತಫಾ ಖಾದ್ರಿ ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಬಳಕೆ ಬೇಡ

ಸಮೀಪದ ಕವಲೂರು ಗ್ರಾಮದಲ್ಲಿ ಪೀರಾನೆ ಪೀರ ದಸ್ತಗೀರ ಮೆಹಬೂಬ ಸುಬಾನಿಯವರ 22ನೇ ಉರುಸು ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಅವರು ಹೇಳಿದಂತೆ ಇವನಾವ ಇವನಾರವ ಎನ್ನದೇ, ಇವ ನಮ್ಮವ ಇವ ನಮ್ಮವ ಎಂದು ಹೊಂದಿಕೊಂಡು ಜೀವನ ನಡೆಸಬೇಕು. ಪ್ರತಿ ಕಾಯಕದಲ್ಲಿ ಸಾಧನೆ ಮಾಡಲು ತಂದೆ-ತಾಯಿಗಳನ್ನು ಪೂಜಿಸಿ,ಗೌರವಿಸಬೇಕು ಎಂದರು.

ಯಲಬುರ್ಗಾದ ರಶೀದ ಅಹಮದ್ ಖಾಜಿಯವರು ಮಾತನಾಡಿ, ದೇಶದ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ದಯೆ ಇದ್ದಲ್ಲಿ ಧರ್ಮ ಇದೆ. ಹೆಣ್ಣು-ಗಂಡು ಎಂದು ಬೇಧ-ಭಾವ ಮಾಡದೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳನ್ನು ಉತ್ತಮ ಪ್ರಜೆಗಗಳನ್ನಾಗಿ ರೂಪಿಸಬೇಕು. ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಬರಲಿ. ಸಮಾಜದಲ್ಲಿ ಸೌಹಾರ್ದತೆಯ ಜೀವನ ನಡೆಸಬೇಕು. ಮೆಹಬೂಬ ಸುಬಾನಿಯವರ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.

ಕಟಗಿಹಳ್ಳಿಮಠದ ಈಶಪ್ಪ ಅಜ್ಜ , ಪ್ರಮುಖರಾದ ಶಾಹೀದ್ ತಹಶೀಲ್ದಾರ, ಮುತ್ತಣ್ಣ ಬಿಸರಳ್ಳಿ, ನಾಗರಾಜ ಕಗ್ಗಲ್, ದೇವಪ್ಪ ಹಳ್ಳಿ, ಅನ್ವರ ಗಡಾದ, ಗುರುಬಸವರಾಜ ಹಳ್ಳಿಕೇರಿ, ತೋಟಯ್ಯ, ಮಲ್ಲಪ್ಪ, ಹನುಮಂತ, ಮಹಾಂತೇಶ, ನೀಲಪ್ಪ, ನಾಗರಾಜ, ಪ್ರದೀಪ, ಯಲ್ಲಪ್ಪ, ಶರಣಪ್ಪ, ಪ್ರಕಾಶ, ಮೈಲಾರಪ್ಪ, ನಾಗಪ್ಪ, ಮಹಮದ್‌ರಫೀ, ಬದ್ರುದ್ದೀನ, ಸೈಯದ್, ಸಿರಾಜ್, ಪಾನಿಶ, ಜಾಪರಸಾಬ, ಹುಸೇನಸಾಬ, ನಜೀರ, ಬಷೀರ, ಹಸನ, ಮೌಲಾಸಾಬ, ಮೈಬು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net