More

  ಪಿಎಸ್ಐ, ಕೆಇಎ ಪರೀಕ್ಷಾ ಅಕ್ರಮದ ಕಿಂಗ್​ಪಿನ್ ಆರ್​​​​​​​​ಡಿ ಪಾಟೀಲ್ ಕೊನೆಗೂ ಅರೆಸ್ಟ್​!ಮತ್ತೆ ಜೈಲುಪಾಲು

  ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿ, ಬಂಧನ ಭೀತಿಯಿಂದ ಎಸ್ಕೇಪ್​ ಆಗಿದ್ದ ಕಿಂಗ್​ಪಿನ್​ ಆರ್.ಡಿ.ಪಾಟೀಲ್​ನನ್ನು ಕಲಬುರಗಿ ಪೊಲೀಸರು ಕೊನೆಗೂ ಖೆಡ್ಡಾಗೆ ಕೆಡವಿದ್ದಾರೆ.

  ಕಳೆದ 12 ದಿನಗಳ ಹಿಂದೆ ತಲೆ ಮರೆಸಿಕೊಂಡಿದ್ದ ಆರ್​.ಡಿ.ಪಾಟೀಲ್​ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಿಂದ ಕಲಬುರಗಿಗೆ ಆಗಮಿಸುವ ವೇಳೆ ಪೊಲೀಸರು ಬಂಧನ ಮಾಡಿದ್ದಾರೆ. ಸಂಬಂಧಿಕರ ಮನೆಯಿಂದ ಕಲಬುರಗಿಗೆ ಆಗಮಿಸಿ, ನ್ಯಾಯಾಲಯಕ್ಕೆ ಶರಣಾಗಲು ಆಗಮಿಸುತ್ತಿದ್ದ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಡಿಯಲ್ಲಿಯೇ ತೀವ್ರ ನಿಗಾ ಇಟ್ಟಿದ್ದರು. ಶರಣಾಗಲು ಆಗಮಿಸುವ ವೇಳೆ ಬಂಧನ ಮಾಡಿದ್ದಾರೆ.

  ಪರಾರಿಯಾಗಿದ್ದ
  ಕೆಇಎ ಪರೀಕ್ಷಾ ಅಕ್ರಮದಲ್ಲಿ ಎ 1 ಆರೋಪಿಯನ್ನಾಗಿ ಮಾಡಿದ ಬೆನ್ನಲ್ಲೇ ಆರ್. ಡಿ. ಪಾಟೀಲ್​ನನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಇದು ಗೊತ್ತಾದ ಬೆನ್ನಲ್ಲೇ ನ. 7ರಂದು ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿರುವ ವರದಾ ನಗರದಲ್ಲಿನ ಅಪಾರ್ಟ್ಮೆಂಟ್ ಒಂದರಿಂದ ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿತ್ತು.

  ಇನ್ನಿಬ್ಬರ ಬಂಧನ
  ಆರ್​.ಡಿ. ಪಾಟೀಲ್​ ಹಿನ್ನಲೆ ವಿಚಾರಿಸದೆ ಮನೆ ಬಾಡಿಗೆ ನೀಡಿದ ಆರೋಪದ ಮೇಲೆ ಅಪಾರ್ಟ್​​ಮೆಂಟ್​ ಮಾಲೀಕ ಶಂಕರಗೌಡ ರಾಮಚಂದ್ರ ಯಾಳವಾರ ಸೂಪರ್​ವೈಸರ್​-ಸೆಕ್ಯೂರಿಟಿ ಇನ್​ಚಾರ್ಜ್​ ಆಗಿದ್ದ ದಿಲೀಪ್​ ಪವಾರ ಎಂಬಾತನನ್ನು ಅಫಜಲ್​ಪುರ ಪೊಲೀಸರು ಬಂಧಿಸಿದ್ದಾರೆ.

  ಏನಿದು ಪ್ರಕರಣ?
  ಕಳೆದ ಭಾನುವಾರ (ಅ.28) ಕಲಬುರಗಿ ನಗರದ ಖಾಸಗಿ ಕಾಲೇಜು ಕೇಂದ್ರದಲ್ಲಿ ಸರ್ಕಾರದ ನಿಗಮ-ಮಂಡಳಿಗಳ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಜರುಗಿದ ಪರೀಕ್ಷೆಯಲ್ಲಿ ತ್ರಿಮೂರ್ತಿ ಎಂಬಾತ ಬ್ಲೂಟೂತ್ ಬಳಸಿ ಉತ್ತರ ಬರೆಯುತ್ತಿರುವುದು ಪತ್ತೆಯಾಗಿತ್ತು. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅಭ್ಯರ್ಥಿ ತ್ರಿಮೂರ್ತಿ ಸಹೋದರ ಅಂಬರೀಶ್ ಎಂಬಾತ ಪರೀಕ್ಷಾ ಕೇಂದ್ರದ ಹೊರಗಡೆ ಕಾರಿನಲ್ಲಿ ಕುಳಿತು ಉತ್ತರ ಹೇಳುತ್ತಿದ್ದ ಎಂದು ತಿಳಿಸಿದರು. ಅಂಬರೀಶ್‌ಗೆ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಗ್ಯಾಂಗಿನವರು ಸಹಾಯ ಮಾಡುತ್ತಿದ್ದರು ಎಂದು ಬಾಯಿಬಿಟ್ಟಿದ್ದ.

  ಪಿಎಸ್​ಐ ಅಕ್ರಮದ ಕಿಂಗ್​ಪಿನ್​
  ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪಿಎಸ್​ಐ ಪರೀಕ್ಷಾ ಅಕ್ರಮದಲ್ಲೂ ಇದೇ ಆರ್​ಡಿ ಪಾಟೀಲ್​ ಕಿಂಗ್​ಪಿನ್​ ಆಗಿದ್ದ. ಅನೇಕ ದಿನಗಳವರೆಗೆ ಜೈಲುಪಾಲಾಗಿದ್ದ ಆರ್​ಡಿ ಪಾಟೀಲ್​ 2022ರ ಡಿಸೆಂಬರ್​ 18ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಕಲಬುರಗಿ ಹೈಕೋರ್ಟ್ ಕಿಂಗ್ ಪಿನ್ ಸಹೋದರರಾದ ಆರ್.ಡಿ.ಪಾಟೀಲ್ ಮತ್ತು ಮಹಾಂತೇಶ ಪಾಟೀಲ್​ಗೆ ಜಾಮೀನು ನೀಡಿದರಿಂದ ಬಿಡುಗಡೆಯಾಗಿದ್ದರು.

  KEA ಪರೀಕ್ಷಾ ಅಕ್ರಮ; ಆರ್​.ಡಿ. ಪಾಟೀಲ್​ಗೆ ಆಶ್ರಯ ನೀಡಿದ್ದ ಮನೆ ಮಾಲೀಕ ಸೇರಿದಂತೆ ಇಬ್ಬರು ಅರೆಸ್ಟ್​

  ಕೆಇಎ ಪರೀಕ್ಷಾ ಅಕ್ರಮ: ಬ್ಲೂಟೂತ್ ವಂಚನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts