More

  ಕೆಇಎ ಪರೀಕ್ಷಾ ಅಕ್ರಮ: ಬ್ಲೂಟೂತ್ ವಂಚನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗ

  ಹುಬ್ಬಳ್ಳಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಉದ್ಯೋಗದ ಕನಸು ಕಂಡ ಅಭ್ಯರ್ಥಿಗಳ ಪಾಲಿಗೆ ಇದು ನಿಜಕ್ಕೂ ಅಘಾತಕಾರಿಯಾಗಿ ಸಂಗತಿಯಾಗಿದೆ.

  ಅಭ್ಯರ್ಥಿಯೊಬ್ಬನ ಓ.ಎಂ.ಆರ್ ಶೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಹುಬ್ಬಳ್ಳಿಯಿಂದ ವೈರಲ್ ಆಗಿರುವ ಶಂಕೆ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಕ್ಯಾಮರಾ ಆಗಲಿ, ಮೊಬೈಲ್ ಆಗಲಿ ತೆಗೆದುಕೊಂಡು ಹೋಗುವಂತಿಲ್ಲ. ಹಾಗಾದರೆ, ವೈರಲ್ ಆಗಿರುವ ಓ.ಎಂ.ಆರ್ ಶೀಟ್​ನ ಫೋಟೋ ತೆಗೆದಿದ್ದು ಹೇಗೆ? ಕಲಬುರಗಿ, ಯಾದಗಿರಿ ಹೊರತುಪಡಿಸಿಯೂ ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆಯಾ? ಎಂಬ ಅನುಮಾನ ಮೂಡಿದೆ.

  ಅಕ್ರಮ ನಡೆದಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತಿದೆ ಈ ಓ.ಎಂ.ಆರ್.ಶೀಟ್ ವೈರಲ್ ಪ್ರಕರಣ. ಓಎಂಆರ್ ಶೀಟ್ ಜೊತೆಗೆ ಅಭ್ಯರ್ಥಿಯ ಹಾಲ್ ಟಿಕೆಟ್ ಇಟ್ಟು ಫೋಟೋ ತೆಗೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಫೋಟೋ ಹೊರಗಡೆ ಇರುವವರಿಗೆ ಕಳುಹಿಸಿದರೆ ಯಾವ ಅಭ್ಯರ್ಥಿಗೆ ಯಾವ ಪ್ಯಾರ್ಟನ್ ಪ್ರಶ್ನೆಗಳಿವೆ ಎಂಬುದನ್ನು ತಿಳಿದು ಉತ್ತರ ಹೇಳುವವರಿಗೆ ಸುಲಭವಾಗುತ್ತದೆ.

  KEA exam Scam

  ಕಲಬುರಗಿ ಮಾತ್ರವಲ್ಲದೆ ಹುಬ್ಬಳ್ಳಿಯಲ್ಲೂ ಕೆ.ಎ.ಇ ಪರೀಕ್ಷಾ ಅಕ್ರಮ ನಡೆದಿದೆಯಾ ಎಂಬ ಅನುಮಾನ ಮೂಡಿದೆ. ವೈರಲ್ ಆಗಿರುವ ಹಾಲ್ ಟಿಕೆಟ್​ನ ಅಭ್ಯರ್ಥಿ ಮತ್ತು ಆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕನನ್ನು ವಿಚಾರಣೆ ಮಾಡಿದರೆ ಸತ್ಯ ಬಯಲಿಗೆ ಬರಲಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿಯೂ ಅಕ್ರಮ ನಡೆದಿರುವ ಶಂಕೆಗೆ ಈ ಫೋಟೋ ಪುಷ್ಠಿ ನೀಡುತ್ತಿದೆ. ಕೆಇಎ ಪರೀಕ್ಷಾ ಅಕ್ರಮಗಳು ಬಗೆದಷ್ಟೂ ಬಯಲಾಗುತ್ತಲೇ ಇವೆ.

  ಕಲಬುರಗಿಯಲ್ಲಿ ಅಕ್ರಮ
  ಕಳೆದ ಭಾನುವಾರ ಕಲಬುರಗಿ ನಗರದ ಖಾಸಗಿ ಕಾಲೇಜು ಕೇಂದ್ರದಲ್ಲಿ ಸರ್ಕಾರದ ನಿಗಮ-ಮಂಡಳಿಗಳ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಜರುಗಿದ ಪರೀಕ್ಷೆಯಲ್ಲಿ ತ್ರಿಮೂರ್ತಿ ಎಂಬಾತ ಬ್ಲೂಟೂತ್ ಬಳಸಿ ಉತ್ತರ ಬರೆಯುತ್ತಿರುವುದು ಪತ್ತೆಯಾಗಿತ್ತು. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದಾಗ ಅಭ್ಯರ್ಥಿ ತ್ರಿಮೂರ್ತಿ ಸಹೋದರ ಅಂಬರೀಶ್ ಎಂಬಾತ ಪರೀಕ್ಷಾ ಕೇಂದ್ರದ ಹೊರಗಡೆ ಕಾರಿನಲ್ಲಿ ಕುಳಿತು ಉತ್ತರ ಹೇಳುತ್ತಿದ್ದ ಎಂದು ತಿಳಿಸಿದ್ದಾರೆ. ಅಂಬರೀಶ್‌ಗೆ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಗ್ಯಾಂಗಿನವರು ಸಹಾಯ ಮಾಡುತ್ತಿದ್ದರು ಎಂದು ಬಾಯಿಬಿಟ್ಟಿದ್ದಾನೆ.

  ಇನ್ನು ಯಾದಗಿರಿ ಸರ್ಕಾರಿ ಪದವಿಪೂರ್ವ ಕಾಲೇಜು ಸುತ್ತ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆರೇಳು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರಲ್ಲಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪುಟ್ಟಪ್ಪ ಎಂಬಾತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ವಿಚಾರಣೆ ನಡೆಸಿದ್ದಾರೆ.

  17 ಮಂದಿ ಗ್ರಾಮಸ್ಥರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 20 ಜನರಿಗೂ ಅದು ಕೊನೆಯ ಪ್ರಯಾಣ; ಈ ಘಟನೆ ಬೆಚ್ಚಿಬೀಳಿಸದೆ ಇರದು

  ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ

  Gold, Silver Price; ದುಬಾರಿಯಾಗ್ತಿದೆ ಚಿನ್ನ.. ಈಗ ಎಷ್ಟಿದೆ ನೋಡಿ ಚಿನ್ನ-ಬೆಳ್ಳಿ ದರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts