ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಅವಭೃತ ಸ್ನಾನ

Ksd_Katukuke
Published on

ಕಾಸರಗೋಡು: ಪೆರ್ಲ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಅವಭೃತ ಸ್ನಾನ ಭಾನುವಾರ ಕ್ಷೇತ್ರ ತಂತ್ರಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಶಯನೋತ್ಥಾನ, ಮಂಗಲಾಭಿಷೇಕ, ಶ್ರೀದೇವರ ಅವಭೃತ ಸ್ನಾನಕ್ಕೆ ತೆರಳುವ ಕಾರ್ಯಕ್ರಮ ನಡೆಯಿತು. ಸಂಜೆ ಅವಭೃತ ಸ್ನಾನದಿಂದ ಶ್ರೀ ದೇವರ ಪುನರಾಗಮನದೊಂದಿಗೆ ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ರಾತ್ರಿ ರಂಗಪೂಜೆ, ಹುಲಿಭೂತ ನೇಮ ನಡೆಯಿತು.

9ರಂದು ಬೆಳಗ್ಗೆ ಉಗ್ರಾಣ ಶೋಧನೆ, ಮಧ್ಯಾಹ್ನ ಸಮಾರಾಧನೆ, ಸಂಜೆ 7.50ಕ್ಕೆ ಕಾರ್ತಿಕ ಪೂಜೆ ನಡೆಯುವುದು. ಷಷ್ಠಿ ಮಹೋತ್ಸವ ಅಂಗವಾಗಿ ಶನಿವಾರ ಬೀದಿ ಮಡೆಸ್ನಾನ, ರಾತ್ರಿ ರಥೋತ್ಸವ, ಶ್ರೀ ದೇವರ ಭಂಡಾರಮನೆ ವನಕ್ಕೆ ಸವಾರಿ, ಬೆಡಿ ಉತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net