ಧಾರ್ಮಿಕ ಕ್ಷೇತ್ರಗಳ ಸಂದರ್ಶನದ ಅಭ್ಯಾಸ : ಈಶ್ವರ ಭಟ್ ಪಂಜಿಗುಡ್ಡೆ ಕಿವಿಮಾತು

New Project (14)
Published on

ಬಂಟ್ವಾಳ: ಮನೆಯಲ್ಲಿ ಮಗುವಿಗೆ ಧಾರ್ಮಿಕ ಶಿಕ್ಷಣ ನೀಡುವುದರ ಮೂಲಕ ನಮ್ಮ ಸಂಸ್ಕೃತಿ ಭದ್ರಪಡಿಸಿಕೊಳ್ಳಬೇಕು. ಮನೆ ಮಂದಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.

ಅಮ್ಟೂರು ಗ್ರಾಮದ ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನ್ನಿಧ್ಯದಲ್ಲಿ ಶ್ರೀ ಮಂತ್ರದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಉಜ್ಜಯಿನಿಯ ಯೋಗಿ ಪೀರ್ ರಾಮನಾಥ್ ಜಿ.ಮಹಾರಾಜ್, ಹಿಂದು ರಾಷ್ಟ್ರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಸಂದೀಪ್‌ನಾಥ್, ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಕೆ.ರವೀಂದ್ರ ಕಂಬಳಿ, ಅಶೋಕ್ ಪೂಜಾರಿ ಮುಂಬೈ, ಪ್ರಶಾಂತ್ ಬುನ್ನನ್, ತಾರಾನಾಥ ಪೂಜಾರಿ, ಪ್ರವೀಣ್ ಕೊಟ್ಟಾರಿ, ತಾರಾನಾಥ ಸಾಲಿಯಾನ್, ನಟೇಶ್ ಪೂಜಾರಿ, ಧನರಾಜ್ ಪೂಜಾರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಕಿಶೋರ್ ಕುಮಾರ್ ಕಟ್ಟೆಮಾರ್ ಉಪಸ್ಥಿತರಿದ್ದರು. ಕಟ್ಟೆಮಾರು ಸಾನ್ನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಕ್, ಚಿತ್ರನಟಿ ನವ್ಯ ಪೂಜಾರಿ ಸೇರಿದಂತೆ ಗಣ್ಯರು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿದರು. ದೊಂದಿಬೆಳಕಿನಲ್ಲಿ ಶ್ರೀ ಮಂತ್ರದೇವತೆ ದೈವದ ವೈಭವದ ಕೋಲೋತ್ಸವ ಜರುಗಿತು.

ಧನಸಹಾಯ ಹಸ್ತಾಂತರ

ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಆರೋಗ್ಯ ಸಮಸ್ಯೆ, ಮನೆ ರಿಪೇರಿ, ಮದುವೆ, ಶಿಕ್ಷಣಕ್ಕಾಗಿ ಧನಸಹಾಯ ಮಾಡಲಾಯಿತು. ನಡುಮೊಗೇರು, ಏಮಾಜೆ, ಬೊಂಡಾಲ ಶಾಲೆಗಳಿಗೆ ಸ್ಮಾರ್ಟ್ ಟಿವಿ ಹಾಗೂ ನಲ್ಕೇಮಾರ್ ಶಾಲೆಗೆ ಲ್ಯಾಪ್‌ಟಾಪ್ ನೀಡಲಾಯಿತು. ಕಟ್ಟೆಮಾರ್‌ದ ಸ್ವರ್ಣ ತುಡರ್ ಹಾಗೂ ಕಟ್ಟೆಮಾರ್ದ ಕರ್ತೆದಿ ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net