ಅಭಿವೃದ್ಧಿ ವಂಚಿತ ಕಸ್ತೂರ ಬಾ ಸೇವಾಶ್ರಮ

16arsph1ep....
Published on

ಅರಸೀಕೆರೆ: ಕಸ್ತೂರ ಬಾ ಸೇವಾಶ್ರಮದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಸಾಮಾಜಿಕ ಚಿಂತಕ ಆರ್.ಪಿ.ವೆಂಕಟೇಶ ಮೂರ್ತಿ ಹೇಳಿದರು.


ಕಸ್ತೂರ ಬಾ ಸೇವಾಶ್ರಮದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿಪರ ಕೃಷಿಕರು, ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹತ್ತು ಹಲವು ಕಾರಣಗಳಿಂದ ಸೇವಾಶ್ರಮ ಅಭಿವೃದ್ಧಿಯಿಂದ ವಂಚಿತವಾಗಿರುವುದು ಬೇಸರದ ಸಂಗತಿಯಾಗಿದೆ. ವಾಸ್ತವ ಮನಗಂಡು ಪ್ರಗತಿಪರ ಕೃಷಿಕರು, ಸಾಮಾಜಿಕ ಹಿತ ಚಿಂತಕರ ಸಭೆ ನಡೆಸಿ ಮುಂದಿನ ಪೀಳಿಗೆಗೆ ಪುಣ್ಯ ಭೂಮಿಯ ಮಹತ್ವ ಪಸರಿಸುವ ಕೆಲಸ ಮಾಡುವ ಉದ್ದೇಶವಿದೆ. ಎಲ್ಲರೂ ಕೈ ಜೋಡಿಸಿ ಕೆಲಸ ಮಾಡೋಣ ಎಂದರು.


ಸೇವಾಶ್ರಮದ ಟ್ರಸ್ಟಿ ಶಿವರಾಜು ಮಾತನಾಡಿ, 86 ಎಕರೆ ಭೂಮಿ ಹೊಂದಿದ್ದು ಬಗೆ ಬಗೆಯ ಚಟುವಟಿಕೆ ಹಮ್ಮಿಕೊಳ್ಳಲು ಯೋಗ್ಯವಾಗಿದೆ. ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ರಾಜ್ಯದ ಕನಸು ನನಸಾಗಿಸಲು ಕಡೆಯವರೆಗೂ ಹೋರಾಟ ನಡೆಸುವ ಸಂಕಲ್ಪ ಮಾಡಿದ್ದೇನೆ ಎಂದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿದರು. ಉದ್ಯಮಿ ಕೆ.ಪಿ.ವಿಶ್ವನಾಥ್, ಮಂಜುನಾಥ್, ನವೀನ್, ರಮೇಶ್, ಪರಮಶಿವು, ರಾಮಸ್ವಾಮಿ, ಮೋಹನ್‌ಕುಮಾರ್, ವಿಜಯಕುಮಾರ್, ಕೆಪಿಎಸ್‌ಸಿ ನಿವೃತ್ತ ನಿರ್ದೇಶಕ ಗೋವಿಂದರಾಜು, ಲೇಖಕಿ ಮಮತಾ, ನಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net