ಜಾನಪದ ಲೋಕ ಕಲಾವಿಧರ ಕಾಶಿ

10-03-rama-janapadaloka
Published on

ರಾಮನಗರ: ನಾಗೇಗೌಡರು ಜಾನಪದ ಲೋಕದಂತಹ ಸಂಸ್ಥೆಯನ್ನು ಸ್ಥಾಪಿಸದಿದ್ದರೆ ಜಾನಪದ ಕಲೆಗಳು ಉಳಿಯುತ್ತಿದ್ದವಾ ಎನ್ನುವುದನ್ನು ಯೋಚಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಹೊರವಲಯದ ಜಾನಪದ ಲೋಕದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ನಡೆಯುವ ಲೋಕಸಿರಿ ತಿಂಗಳ ಅತಿಥಿ-103ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಾನಪದ ಲೋಕ ಸ್ಥಾಪನೆಯಾದ ಮೇಲೆ ಪ್ರಸಿದ್ಧ, ಅದ್ಬುತ ಜನಪದ ಕಲಾವಿದರನ್ನು ಕರೆಸಿ ಗೌರವ ಸನ್ಮಾನವನ್ನು ನಿರಂತರವಾಗಿ ಮಾಡುತ್ತಾ ಬರಲಾಗುತ್ತಿದೆ. ಬೇರೆ ಬೇರೆ ಕಡೆಗಳಿಂದ ಕಲಾವಿದರನ್ನು ಕರೆಸಿ ಪ್ರದರ್ಶನಕ್ಕೆ ವೇದಿಕೆ ನೀಡಲಾಗುತ್ತಿದೆ. ಆದರೆ ಅವರಿಗೆ ಗೌರವಿಸದೆ ಹಣ ಕೊಟ್ಟು ಕಳುಹಿಸುತ್ತೇವೆ. ಜಾನಪದ ಲೋಕದಲ್ಲಿ ಗೌರವ, ಸನ್ಮಾನ, ಕಲಾವಿದರ ಪೋಷಣೆ ಎಲ್ಲವನ್ನೂ ಮಾಡಲಾಗುತ್ತದೆ

ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬು ಕುಂಬಾಪುರ ಮಾತನಾಡಿ, ಜಾನಪದ ಲೋಕ ಇಂದು ವಿಶ್ವ ಮಾನ್ಯತೆ ಪಡೆದಿದೆ. ಸಾವಿರಾರು ಅಜ್ಞಾತ ಜಾನಪದ ಕಲಾವಿದರನ್ನು ಬೆಳಕಿಗೆ ತರುವ ಕೆಲಸವನ್ನು ಜಾನಪದ ಲೊಕ ಮಾಡುತ್ತಿದೆ ಎಂದರು ಎಂದರು.

ಬಾಗಲಕೋಟೆ ಜಿಲ್ಲೆಯ ಗೊಂದಲಿಗರ ಕಲಾವಿದರಾದ ಹನುಮಂತಪ್ಪ ವೆಂಕಪ್ಪ ಸುಗತೇಕರ ಇವರನ್ನು ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಕಲಾವಿದರಾದ ಹನುಮಂತ ವೆಂಕಪ್ಪ ಸುಗತೇಕರ ಮತ್ತು ತಂಡದವರು ಗೊಂದಲಿಗರ ಪಾಪಪುಣ್ಯದ ಕಥೆ, ತಂಗಿ ಹೋಗುವ ಬಾರಮ್ಮ, ಅಂಬಾಭವಾನಿ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು. ತಮ್ಮ ಕುಟುಂಬದ ಕುಡಿಗಳಾದ ಅಂಬಾಜಿ, ಅಕ್ಷಯ್, ಚೇತನ್, ರಾಹುಲ್ ಸಂಬಾಳ ಮತ್ತು ತಾಳ ನುಡಿಸಿ ದನಿಗೂಡಿಸಿದರು. ಕಲೆಯಿಂದ ಜಾನಪದ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ, ಕೇಂದ್ರ ಸರ್ಕಾರದ ಪದ್ಮಶ್ರಿ ಪ್ರಶಸ್ತಿ ಪಡೆದ ಕುಟುಂಬ ನನ್ನದು ಎನ್ನಲು ನನಗೆ ಹೆಮ್ಮೆ ಕಲಾವಿದರು ಹರ್ಷ ವ್ಯಕ್ತಪಡಿಸಿದರು. ಸಂವಾದದಲ್ಲಿ ಗೊಂದಲಿಗರ ಸಂಪ್ರದಾಯ ಮತ್ತು ವಾದ್ಯಗಳ ಸ್ವಾರಸ್ಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌ವಹಿಸಿದ್ದರು.

ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಸು.ತಾ.ರಾಮೇಗೌಡ ಇದ್ದರು. ಕ್ಯೂರೇಟರ್ ಡಾ.ರವಿ ಯು ಎಂ, ರಂಗ ಸಹಾಯಕ ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net