ಕಾಶೀ ಜಗದ್ಗುರುಗಳ ಸಿದ್ಧಾಂತ ಶಿಖಾಮಣಿ ಪ್ರವಚನ :೨೭ರಂದು ಧರ್ಮಸಭೆ ಉದ್ಘಾಟನೆ

Kashi Jagadguru
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಾಶೀ e್ಞÁನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ೧೮ನೇ ವರ್ಷದ ಆಷಾಢ ಮಾಸದ ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮ ಜರುಗುವುದು.

ನಗರದ ಸೊಗಸಕೇರಿಯ ಶ್ರೀ ಗುರುಶಾಂತಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಜೂನ್ ೨೭ರಂದು ರಾತ್ರಿ ೮ಕ್ಕೆ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರು ಧರ್ಮಸಭೆ ಉದ್ಘಾಟಿಸುವರು.

ಜೂನ್ ೨೭ರಿಂದ ಜುಲೈ ೨ರವರೆಗೆ ಪ್ರವಚನ ಜರುಗುವುದು. ಬೆಳಗ್ಗೆ ೯ಕ್ಕೆ ಕಾಶೀ ಜಗದ್ಗುರು ಮಹಾ ಸನ್ನಿಧಿಯವರಿಂದ ಇಷ್ಟಲಿಂಗ ಬಹಿರಂಗ ಮಹಾಪೂಜೆ ನಡೆಯಲಿದೆ. ಜುಲೈ ೩ರಂದು ಬೆಳಗ್ಗೆ ೧೦ಕ್ಕೆ ನೆಹೆರುಗಂಜ ಹನುಮಾನ್ ಮಂದಿರದಿAದ ಸಾರೋಟಿನಲ್ಲಿ ಜಗದ್ಗುರು ಮಹಾ ಸನ್ನಿಧಿಯವರ ಮೆರವಣಿಗೆ ಸಾಗಿ ಬಂದು ಕಲ್ಯಾಣ ಮಂಟಪಕ್ಕೆ ಬರ ಮಾಡಿಕೊಳ್ಳಲಾಗುವುದು. ನಂತರ ಧರ್ಮ ಸಭೆ ಜರುಗುವುದು. ಕಡಗಂಚಿಯ ವೀರತಪಸ್ವಿ ಶ್ರೀ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸುವರು. ಶಖಾಪುರ ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯರು, ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು ಹಾಗೂ ಅನೇಕ ರಾಜಕೀಯ ಧುರೀಣರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net