ಕಾಸರಗೋಡು ಜಿಲ್ಲಾ ಶಾಲಾ ವಿಜ್ಞಾನ ಮೇಳ

Ksd_Science Fair
Published on: 

ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ವಿಜ್ಞಾನೋತ್ಸವ ಚೆಮ್ನಾಡು ಜಮಾ-ಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡಿತು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮೇಳ ಉದ್ಘಾಟಿಸಿದರು.

ಕಾಸರಗೋಡು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಧ್ವಜಾರೋಹಣ ನೆರವೇರಿಸಿದರು. ಸಿಪಿಸಿಆರ್‌ಐ ನಿರ್ದೇಶಕ ಡಾ.ಬಾಲಚಂದ್ರ ಹೆಬ್ಬಾರ್ ವಿಜ್ಞಾನ ಸಂದೇಶ ನೀಡಿದರು.

ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ಗೀತಾ ಕೃಷ್ಣನ್, ಬದರುಲ್ ಮುನೀರ್, ಅಮೀರ್ ಪಾಲೋತ್, ಶಾಹಿನಾ ಕೆ.ಎಂ ಮತ್ತು ಮುಜೀಬ್ ಅಹಮದ್ ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಟಿ.ವಿ.ಮಧುಸೂಧನ್ ಸ್ವಾಗತಿಸಿದರು. ಸಿಜೆಎಚ್‌ಎಸ್ ಮುಖ್ಯಶಿಕ್ಷಕಿ ಕೆ.ವಿಜಯನ್ ವಂದಿಸಿದರು.