ಕಸಾಪ ಚುನಾವಣೆಗಿದ್ದ ಅಡ್ಡಿ ನಿವಾರಣೆ

Kasapa
Published on

| ಕಾರ್ಯಕಾರಿ ಸಮಿತಿ ಅಧಿಕಾರವಧಿ ವಿಸ್ತರಣೆ ಪ್ರಶ್ನಿಸಿದ್ದ ಅರ್ಜಿ ವಾಪಸ್ ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧಿಕಾರವಧಿ ವಿಸ್ತರಣೆ ವಿರೋಧಿಸಿ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಮೊಕದ್ದಮೆಯನ್ನು ಅರ್ಜಿದಾರರು ಹಿಂಪಡೆದಿದ್ದು, ಪರಿಷತ್ತಿನ ಅಧ್ಯಕ್ಷರ ಚುನಾವಣೆಗೆ ಎದುರಾಗಿದ್ದ ಸಮಸ್ಯೆಗೆ ಪರಿಹಾರ ದೊರೆತಿದೆ.

ನಾವು ಮಾಡಿರುವುದು ಕಾನೂನು ಬದ್ಧವಾಗಿವೆ ಎಂದು ನ್ಯಾಯಾಲಯದಲ್ಲಿಯೇ ಸಾಬೀತಾಗಿದೆ. ಬೈಲಾ ಪ್ರಕಾರ, ಅವಧಿ ಮುಗಿದ ಬಳಿಕ ಆರು ತಿಂಗಳು ಅಧಿಕಾರಾವಧಿ ವಿಸ್ತರಣೆಗೆ ಅವಕಾಶವಿದೆ. ಅದು ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯವಾಗಬೇಕು. ಆದರೆ, ನನಗೆ ಆ ಬಗ್ಗೆ ಕಿಂಚಿತ್ತೂ ಒಲವಿಲ್ಲ. | ಮನು ಬಳಿಗಾರ್ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ಈಗಿರುವ ಕಾರ್ಯಕಾರಿ ಸಮಿತಿ ಬೈಲಾ ತಿದ್ದುಪಡಿ ಮಾಡಿ ಅಧಿಕಾರವಧಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಿತ್ತು. ಬೈಲಾ ಪ್ರಕಾರ ಅನಿವಾರ್ಯ ಪರಿಸ್ಥಿತಿಯಲ್ಲಿ 6 ತಿಂಗಳಿಗೆ ವಿಸ್ತರಿಸಿಕೊಳ್ಳಲು ಮಾತ್ರವೇ ಸಮಿತಿಗೆ ಅವಕಾಶವಿದೆ. ಇದನ್ನು ಪ್ರಶ್ನಿಸಿ ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಬೈಲಾ ತಿದ್ದುಪಡಿ ಪ್ರಕಾರ ಅಧ್ಯಕ್ಷರ ಅಧಿಕಾರವಧಿ 2021ರ ಮಾರ್ಚ್​ಗೆ ಅಂತ್ಯವಾಗಲಿದೆ. ಕಸಾಪ ಹಿತದೃಷ್ಟಿಯಿಂದ ಮೊಕದ್ದಮೆ ಹಿಂದಕ್ಕೆ ಪಡೆದುಕೊಂಡಿದ್ದೇನೆ. ಈಗ ಚುನಾವಣೆಗೆ ದಾರಿ ಸುಗಮವಾಗಿದ್ದು, ಕೂಡಲೇ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಕೋ.ವೆಂ.ರಾಮಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net