ಕಸಾಪದಿಂದ ಮೂರು ದತ್ತಿ ಪ್ರಶಸ್ತಿ ಪ್ರದಾನ

Kasapa
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿಯಿಂದ ನೀಡಲಾಗುವ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ, ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಮತ್ತು ಪಂಕಜಶ್ರೀ ದತ್ತಿ ಪುರಸ್ಕಾರಗಳ ಪ್ರದಾನ ಸಮಾರಂಭ ಇಂದು (ಏ. 13) ಸಂಜೆ 5.00 ಗಂಟೆ ಆಯೋಜಿಸಲಾಗಿದೆ.

ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟ್‌ನ ವಿಶ್ರಾಂತ ನ್ಯಾ.ಡಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿದಾನಿಗಳ ಪರವಾಗಿ ಡಾ.ಎ. ಪುಷ್ಪ ಅಯ್ಯಂಗಾರ್, ಎನ್. ಕೆ. ರಮೇಶ್ ಇತರರು ಭಾಗವಹಿಸಲಿದ್ದಾರೆ.

ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ದತ್ತಿ ಪ್ರಶಸ್ತಿ 2023ಗೆ ಕೊಡಗಿನ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮತ್ತು ಕೋಲಾರದ ಡಾ. ಅಮರೇಂದ್ರ ಹೊಲ್ಲಂಬಳ್ಳಿ ಆಯ್ಕೆಯಾಗಿದ್ದಾರೆ. ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿಗೆ ಬೆಂಗಳೂರಿನ ಕೆ.ಎಸ್. ಪುಟ್ಟಲಿಂಗಯ್ಯಗೌಡ ಹಾಗೂ ಪಂಕಜಶ್ರೀ ದತ್ತಿ ಪ್ರಶಸ್ತಿಗೆ ದಾವಣಗೆರೆಯ ಕೆ.ಜಿ.ಸರೋಜಾ ನಾಗರಾಜ್ ಮತ್ತು ಬೆಂಗಳೂರಿನ ಡಾ.ಕೆ.ವಿ.ರಾಜೇಶ್ವರಿ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net