ರಮಾ ಫಣಿ ಭಟ್ ಕಸಾಪ ಪ್ರಶಸ್ತಿಗೆ ಆಯ್ಕೆ

Kasapa award - Rama pani bhat
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2024ನೇ ಸಾಲಿನ ‘ಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್. ಇಂದಿರಾ ಪ್ರಶಸ್ತಿ’ಗೆ ವಿಶೇಷ ದೃಷ್ಟಿ ಚೇತನ ಲೇಖಕಿ ರಮಾ ಫಣಿ ಭಟ್ ಗೋಪಿ ಆಯ್ಕೆಯಾಗಿದ್ದಾರೆ.

ದೃಷ್ಟಿ ವಿಶೇಷ ಚೇತನ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ. ಎಚ್. ವಿಶ್ವನಾಥ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ಪುರಸ್ಕಾರವನ್ನು ಸ್ಥಾಪಿಸಿದ್ದು, ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ.

ರಮಾ ಫಣಿ ಭಟ್ ಗೋಪಿಯವರು ಎಂ.ಎ. ಮತ್ತು ಎಂ.ಕಾಂ.ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದವರಾಗಿದ್ದು ಬದುಕನ್ನು ಸವಾಲಾಗಿ ಸ್ವೀಕರಿಸಿದ ಸೃಜನಶೀಲ ಬರಹಗಾರ್ತಿ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿದ್ದು , ಚಂದನ, ಎಫ್.ಎಂ ವಾಹಿನಿಗಳೂ ಸೇರಿ ಹಲವೆಡೆ ಕವಿಗೋಷ್ಠಿಗಳಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net