ಪ್ರೊ.ಸಿ.ಎಚ್. ಮರಿದೇವರ ದತ್ತಿ ಪ್ರಶಸ್ತಿ ಪ್ರಕಟ

Kasapa
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023ನೇ ಸಾಲಿನ ಪ್ರೊ.ಸಿ.ಎಚ್.ಮರಿದೇವರು ದತ್ತಿ ಪ್ರಶಸ್ತಿಗೆ ಕುಷ್ಟಗಿಯ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ವಿವಿಧ ಕ್ಷೇತ್ರದ ನಾಲ್ವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಚಾಮರಾಜನಗರದ ಹಿರಿಯ ಬರಹಗಾರ ಕೆ.ಸಿ.ಶಿವಪ್ಪ, ರಾಯಚೂರಿನ ಕೃಷಿತಜ್ಞೆ ಕವಿತಾ ಮಿಶ್ರ, ತುಮಕೂರಿನ ಕನ್ನಡ ಸೇವಕ ಡಾ.ಬಿ.ನಂಜುಂಡ ಸ್ವಾಮಿ ಮತ್ತು ತುಮಕೂರಿನ ಸಂಗೀತ ಸಾಧಕ ಮಲ್ಲಿಕಾರ್ಜುನ ಕೆಂಕೆರೆ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಪರಿಷತ್ತು ಕಾರ್ಯದರ್ಶಿ ಡಾ. ಪದ್ಮಿನಿ ನಾಗರಅಜು, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು, ದತ್ತಿ ದಾನಿಪರವಾಗಿ ಎಸ್. ರಾಜಶೇಖರ್, ಎಂ.ಎಸ್. ರವಿಕುಮಾರ್ ಮತ್ತು ಕೆ.ಎಸ್. ಸಿದ್ದಲಿಂಗಪ್ಪ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net