ಕಸಾಪ ಪ್ರಕಟಣೆಗಳಿಗೆ ರಿಯಾಯಿತಿ

Kasapa
Published on

ಬೆಂಗಳೂರು: ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೇ ತಿಂಗಳಾದ್ಯಂತ ತನ್ನ ಪ್ರಕಟಣೆಗಳಿಗೆ ಶೇ. 10 ರಿಂದ 75ರವರೆಗೆ ರಿಯಾಯಿತಿ ಘೋಷಿಸಿದೆ.

ಪರಿಷತ್ತು 1,800ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಎಂಟು ಸಂಪುಗಳ ಬೃಹತ್ ಕನ್ನಡ ಕನ್ನಡ ನಿಘಂಟು, ಕನ್ನಡ ಸಂಕ್ಷಿಪ್ತ ನಿಘಂಟು, ರತ್ನಕೋಶ, ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟು, ಹಳೆಗನ್ನಡ ಕೃತಿಗಳು ಹಾಗೂ ಅವುಗಳ ಗದ್ಯಾನುವಾದಗಳು, ಶತಮಾನೋತ್ಸವ ಮಾಲಿಕೆ ಕೃತಿಗಳು, ವ್ಯಾಕರಣ ಛಂದಸ್ಸಿಗೆ ಸಂಬಂಧಿಸಿದ ಶಾಸ ಗ್ರಂಥಗಳು, ಜೀವನ ಚರಿತ್ರೆಗಳು, ದಲಿತ ಮತ್ತು ಮಹಿಳಾ ಸಂಪುಟಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಅಪರೂಪದ ಸಂಶೋಧನಾ ಕೃತಿಗಳೂ ಸೇರಿವೆ.

ವಾರದ ಎಲ್ಲ ದಿನಗಳೂ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಪರಿಷತ್ತಿನಲ್ಲಿ ಮಾರಾಟವಿರುತ್ತದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net