ಮಹಾಂತೇಶ್ ಹತ್ಯೆ ಕೇಸಿನ ವರದಿ ಕೊಡಿ

KAS Officer Mahantesh
Published on

ಬೆಂಗಳೂರು: ಕೆಎಎಸ್ ಅಧಿಕಾರಿ ಎಸ್.ಪಿ. ಮಹಾಂತೇಶ್ ಹತ್ಯೆ ಪ್ರಕರಣ 8 ವರ್ಷಗಳ ಬಳಿಕ ಮತ್ತೆ ಜೀವ ಪಡೆದಿದೆ. ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್​ಎಚ್​ಆರ್​ಸಿ) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಂಡಿದ್ದರೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವಂತೆ 2015ರಲ್ಲಿ ತೀರ್ಪು ನೀಡಿತ್ತು. ಇದೀಗ ಪ್ರಕರಣದ ವರದಿ ಕೇಳಿ ಪೊಲೀಸ್ ಕಮಿಷನರ್ ಹಾಗೂ ಸಹಕಾರ ಇಲಾಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಯೋಗದ ಹಾಲಿ ಅಧ್ಯಕ್ಷ ಡಿ.ಎಚ್. ವಘೇಲಾ ಪತ್ರ ಬರೆದಿದ್ದಾರೆ.

ಬೆಂಗಳೂರಿನ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ವಿಭಾಗ ಉಪ ನಿರ್ದೇಶಕರಾಗಿದ್ದ ಮಹಾಂತೇಶ್, ಸಹಕಾರ ಸಂಘಗಳ ವಹಿವಾಟುಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಲು ಮುಂದಾಗಿದ್ದರು. ಈ ನಡುವೆ 2012ರ ಮೇನಲ್ಲಿ ಅರಮನೆ ರಸ್ತೆಯ ಮಹಾರಾಣಿ ಕಾಲೇಜು ವೃತ್ತದಲ್ಲಿ ಹತ್ಯೆಯಾಗಿದ್ದರು. ಪ್ರಕರಣ ಸಂಬಂಧ ಕೆಲ ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net