

ರಾಮನಗರ : ಲಿಂಗ ಎನ್ನುವುದು ದೈಹಿಕ ಲಕ್ಷಣಕ್ಕೆ ಅನುಗುಣವಾಗಿರುವುದೇ ವಿನಃ ನಮ್ಮೊಳಗಿರುವ ಚೇತನಕ್ಕೆ ಸೀ, ಪುರುಷ ಎಂಬ ಯಾವುದೇ ಬೇಧವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ವಿ.ರೇಣುಕ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಎಲ್‌ಜಿಬಿಟಿಕ್ಯೂಐಎ ಪ್ಲಸ್ ಸಮುದಾಯದ ಸದಸ್ಯರ ಹಕ್ಕುಗಳು ಮತ್ತು ಸವಲತ್ತುಗಳ ಕುರಿತು, ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು, ಅರೆಕಾಲಿಕ ಕಾನೂನು ಸ್ವಯಂಸೇವಕರು ಮತ್ತು ಎಲ್‌ಜಿಬಿಟಿಕ್ಯೂಐಎ ಪ್ಲಸ್ ಸಮುದಾಯದವರಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ವಾತನಾಡಿದರು.
ಪುರಾಣ ಕಾಲದಿಂದಲೂ ಅರ್ಧನಾರೀಶ್ವರ ಪರಿಕಲ್ಪನೆ ಮೂಲಕ ಗಂಡಿನಲ್ಲಿ ಹೆಣ್ಣಿನ ಗುಣ, ಹೆಣ್ಣಿನಲ್ಲಿ ಗಂಡಿನ ಗುಣ ನೋಡುತ್ತಾ ಬಂದಿದ್ದೇವೆ. ಇದರ ಅರ್ಥ ಸವಾನತೆ ಎನ್ನುವುದು ಎಲ್ಲರಿಗೂ ಅನ್ವಯವಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು, ಸವಾಜದಲ್ಲಿ ಎಲ್ಲರಿಗೂ ಸವಾನ ಸ್ಥಾನವಾನ ನೀಡಿ ಗೌರವಿಸಬೇಕು ಎಂದರು.
ಪಾಲಕರು ಅಥವಾ ಸವಾಜ ತೃತೀಯ ಲಿಂಗಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಅವರು ಕೂಡ ಬೆಳೆಯಲು ಅವಕಾಶ ದೊರೆಯುತ್ತದೆ ಎಂದರು.
ಭಾರತೀಯ ನ್ಯಾಯಾಲಯವು ಎಲ್‌ಜಿಬಿಟಿಯುಎ ಪ್ಲಸ್ ಗುಂಪುಗಳಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಬಹಳ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಈ ಸಮುದಾಯಗಳ ಮೂಲಭೂತ ಸ್ವಾತಂತ್ರ್ಯದ ಹೆಚ್ಚಿನ ಮನ್ನಣೆ ಹಾಗೂ ರಕ್ಷಣೆಗಾಗಿ ಪ್ರಮುಖ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಿದೆ. ಅದರಲ್ಲಿ ಪ್ರಮುಖವಾದವು, ಸುಪ್ರಿಯಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ. ಈ ಪ್ರಕರಣ ಲೈಂಗಿಕ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳು ಹಾಗೂ ವಿವಾಹದ ಬಗ್ಗೆ ಮಹತ್ತರ ತೀರ್ಪನ್ನು ನೀಡಿದೆ ಎಂದು ತಿಳಿಸಿದರು.
2024ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸವಾಜದ ಇತರ ಪ್ರಜೆಗಳಂತೆ ಸರಿ ಸವಾನವಾಗಿ ಬದುಕುವ ಹಕ್ಕಿದೆ ಎನ್ನುವ ಅಂಶದ ಮೇಲೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು.
ತೀರ್ಪನ್ನು ಪರಿಣಾಮಕಾರಿಯಾಗಿ ಅನುಷ್ಠಾನ ವಾಡುವ ನಿಟ್ಟಿನಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಮಂಗಳಮುಖಿ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ಹಾಗೂ ಅವರಿಗೆ ಅಗತ್ಯ ನೆರವು ನೀಡಲು ದೇಶದಲ್ಲಿ ಮೊದಲ ಬಾರಿಗೆ ಸಮುದಾಯಕ್ಕೆ, ಕಾನೂನು ನೆರವು ಮತ್ತು ಸೇವೆಗಳ ಯೋಜನೆ-2022ರಲ್ಲಿ ಉದ್ಯೋಗದಲ್ಲಿ ಮೀಸಲು, ಆಧಾರ್ ಚೀಟಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗೆ ಸಹಾಯ ವಾಡುವುದಕ್ಕೆ ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾ ಪಿ.ಆರ್.ಸವಿತಾ, 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸಿ.ತಮ್ಮಣ್ಣ, ಜಿಲ್ಲಾ ವಕೀಲರ ಸಂದ ಉಪಾಧ್ಯಕ್ಷ ವಿ.ಚಂದ್ರಶೇಖರ್, ಕಾರ್ಯದರ್ಶಿಗಳಾದ ಎಸ್.ತಿಮ್ಮೇಗೌಡ, ಖಜಾಂಚಿ ಆರ್.ಸಿ.ಮಂಜೇಶ್ ಗೌಡ, ಸಾವಾಜಿಕ ಕಾರ್ಯಕರ್ತೆ ಹಾಗೂ ಒಂದೆಡೆ ಸಂಸ್ಥೆಯ ಖಜಾಂಚಿ ರಕ್ಷಿತಾ ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.
ಸಮುದಾಯ ಒಗ್ಗಟ್ಟಾಗಲಿ : ತೃತೀಯ ಲಿಂಗಿಗಳು ಭಯ, ನಾಚಿಕೆ, ಸಾವಾಜಿಕ ಭೇದ, ಖಿನ್ನತೆಯಿಂದ ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರವೃತ್ತಿ, ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಬಲವಂತದ ಒತ್ತಾಯ, ಮುಂತಾದ ಸಮಸ್ಯೆಗಳು ಗಂಭೀರ ಸ್ವರೂಪದ್ದು, ಇವುಗಳ ವಿರುದ್ಧ ಹೋರಾಡಲು ಸವಾಜ ಮತ್ತು ತೃತೀಯ ಲಿಂಗದ ಸಮುದಾಯದವರು ಒಟ್ಟಾಗಿ ಕೈಜೋಡಿಸಬೇಕು ಎಂದು ಬಿ.ವಿ.ರೇಣುಕ ತಿಳಿಸಿದರು.