

Karwar: ನಗರದ ಮಾರುತಿ ದೇವಸ್ಥಾನದ ಜಾತ್ರೆಯ ಅಂಗವಾಗಿ ಶನಿವಾರ ನಡೆದ ರಂಗೋಲಿ ಪ್ರದರ್ಶನ ಹಾಗೂ ಸ್ಪರ್ಧೆ ಕಲಾರಸಿಕರ ಅಚ್ಚರಿಗೆ ಕಾರಣವಾಯಿತು. ಮಾರುತಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಕೆಇಬಿ ರಸ್ತೆ ಸೇರಿ ವಿವಿಧೆಡೆ 100 ಕ್ಕೂ ಅಧಿಕ ಕ್ಯಾರಿಕೇಚರ್ ಹಾಗೂ ಚುಕ್ಕೆ ರಂಗೋಲಿಗಳು ಗಮನ ಸೆಳೆದವು.
ಶ್ರೀರಾಮ, ಕೃಷ್ಣ, ದುರ್ಗೆ ಮುಂತಾದ ದೇವರು, ಇತ್ತೀಚೆಗೆ ನಿಧನರಾದ ಡಾ.ಮನಮೋಹನ ಸಿಂಗ್, ಪದ್ಮಶ್ರೀ ತುಳಸಿ ಗೌಡ, ಉದ್ಯಮಿ ರತನ್ ಟಾಟಾ,ವಾಜಪೇಯಿ, ಮಾತ್ರವಲ್ಲ ಸ್ಥಳೀಯ ಮೀನುಗಾರರ ಮುಖಂಡ ದಿವಂಗತ ರಾಜು ತಾಂಡೇಲ, ಪ್ರಧಾನಿ ಮೋದಿ, ವಿಶ್ವ ಚೆಸ್ ಚಾಂಪಿಯನ್ ಗುಕೇಶ್, ಪ್ರಸಿದ್ಧ ಪುಷ್ಪಾ 2 ಚಿತ್ರದ ದೃಶ್ಯ ಹೀಗೆ, ಒಂದಕ್ಕಿಂತ ಒಂದು ಚಂದದ, ಭಾವಚಿತ್ರಗನ್ನು ಮೀರಿಸಬಲ್ಲ ರಂಗೋಲಿಗಳು ಗಮನ ಸೆಳೆದವು. ಸಾವಿರಾರು ಜನ ವೀಕ್ಷಿಸಿ ಅಚ್ಚರಿ ಪಟ್ಟರು. ಫೋಟೋ ತೆಗೆದುಕೊಂಡರು. ದೇವರ ಪಲ್ಲಕ್ಕಿ ಉತ್ಸವ ನಡೆಯಿತು.