Society Election ಹಳಿಯಾಳ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ :12 ರಲ್ಲಿ 10 ಸ್ಥಾನ ಗೆದ್ದ ಬಿಜೆಪಿ

Society Election
Published on

ಹಳಿಯಾಳ /Society Election: ಪಟ್ಟಣದ  ರೈತರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಜರುಗಿತು. ಬಳಿಕ ರಾತ್ರಿ 9.30 ಗಂಟೆವರೆಗೆ ಜರುಗಿದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮಾಜಿ ಎಂಎಲ್ ಸಿ ಶ್ರೀಕಾಂತ ಘೋಟ್ನೇಕರ್ ಸೇರಿ 10 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

Society Election ಒಬ್ಬ ಅವಿರೋಧ ಆಯ್ಕೆ

ಒಟ್ಟೂ 12 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಈ ಸೊಸೈಟಿಯಲ್ಲಿ ಉದಯಕುಮಾರ ಜಾಧವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌. ಕಾಂಗ್ರೆಸ್ 1 ಸ್ಥಾನ ಗೆದ್ದಿದ್ದು, ಕರ್ಲಕಟ್ಟಾ ಮತಕ್ಷೇತ್ರದಿಂದ ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸಂಜಯ ಪಾಟೀಲ್ ಕ್ಯಾತನಗೇರಾ ಜಯ ಗಳಿಸಿಕೊಂಡಿದ್ದಾರೆ.

ಕೆಡಿಸಿಸಿಗೆ ತಯಾರಿ ಮುಂಬರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಾಲಿ ಸದಸ್ಯ ಎಸ್. ಎಲ್. ಘೋಟ್ನೆಕರ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ತಮ್ಮ ಹಾದಿಯನ್ನು ಸುಗಮಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net