ಕಾರವಾರದಲ್ಲಿ ಹಸಿರಾಯ್ತು ನೀಲಿ ಸಮುದ್ರ

8KWR6
Published on

ಕಾರವಾರ: ಬೈತಖೋಲ್ ಭಾಗದಲ್ಲಿ ನೀಲಿ ಸಮುದ್ರ ಹಸಿರಾಗಿದೆ.

ಬೈತಖೋಲ್ ವಾಣಿಜ್ಯ ಹಾಗೂ ಮೀನುಗಾರಿಕೆ ಬಂದರು ಮತ್ತು ಅದರ ಸುತ್ತಲಿನ ಪ್ರದೇಶದ ನೀರಿನಲ್ಲಿ ಭಾರಿ ಪ್ರಮಾಣದಲ್ಲಿ ಸಮುದ್ರ ಪಾಚಿಗಳು ಕಾಣಿಸಿಕೊಂಡಿದ್ದು, ಈ ಬಣ್ಣ ಬದಲಾವಣೆಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಕೆಲ ದಿನಗಳ ಹಿಂದೆ ಅಲೆಗಳ ಪ್ರಭಾವದಿಂದ ಸಮುದ್ರದಲ್ಲಿ ಜೀವ ದೀಪ್ತಿ ಎಂಬ ಬೆಳಕು ಮೂಡುತ್ತಿತ್ತು. ಇತ್ತೀಚೆಗೆ ಪಕ್ಕದ ಗೋವಾ ಹಾಗೂ ಉಡುಪಿಯಲ್ಲೂ ಸಮುದ್ರ ಬಣ್ಣ ಬದಲಾಯಿಸಿದ ಸುದ್ದಿ ಬಂದಿತ್ತು. ಇದು ಸಮುದ್ರ ಪಾಚಿಗಳ ಪ್ರಭಾವವೂ ಆಗಿರಬಹುದು ಅಥವಾ ಸಮುದ್ರ ಮಾಲಿನ್ಯದ ಲಕ್ಷಣವೂ ಆಗಿರಬಹುದು ಎಂದು ಸಾಗರ ವಿಜ್ಞಾನಿ ಡಾ.ಶಿವಕುಮಾರ ಹರಗಿ ಹೇಳಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net