ಕಾರವಾರ-ಗೋವಾ ಸಂಚಾರ ಬಂದ್

Road closed
Published on

ಕಾರವಾರ: ಸದಾಶಿವಗಡ ಕೋಡಿಬಾಗ ನಡುವೆ ಕಾಳಿ ನದಿಗೆ ಕಟ್ಟಲಾಗಿರುವ ಸೇತುವೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಹೊಸ ಸೇತುವೆ ಸಮರ್ಪಕವಾಗಿದ್ದರೂ ಅದು ಸುರಕ್ಷಿತವಾಗಿರುವ ಅನುಮಾನವಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಗಳು ಬಂದು ಸ್ಥಳ‌ ಪರಿಶೀಲನೆ ನಡೆಸಿ, ವರದಿ ನೀಡುವವರೆಗೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಡಿಸಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಹಲವರಿಗೆ ಸಮಸ್ಯೆ
ಸದಾಶಿವಗಡ ಕಾರವಾರ ವಾಹನ ಸಂಚಾರ ಬಂದ್ ಆಗಿರುವುದರಿಂದ ಹಲವು ಸಮಸ್ಯೆಗಳು ಉಂಟಾಗಿವೆ. ಉದ್ಯೋಗಕ್ಕೆ ಆಗಮಿಸುವವರು ಅಥವಾ ತೆರಳುವವರಿಗೆ‌ ತೀವ್ರ ಸಮಸ್ಯೆಯಾಗಿದೆ. ಹೆದ್ದಾರಿ ಬಂದ್ ಆಗಿದ್ದರಿಂದ ಸದಾಶಿವಗಡ ಅಮೃತ ವಿದ್ಯಾಲಯಂಗೆ ರಜೆ ಘೋಷಿಸಲಾಗಿದೆ. ಕವಿವಿ ಸೆಮಿಸ್ಟರ್ ಪರೀಕ್ಷೆಗಳಿದ್ದು ಕಾಲೇಜ್ ಗೆ ಹೋಗುವವರಿಗೆ ಸಮಸ್ಯೆ ಉಂಟಾಗಿದೆ.
ಎಫ್ ಐಆರ್
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿ 41 ವರ್ಷದ ಹಳೆಯ ಸೇತುವೆಯ ಧಕ್ಷತೆ ಗಮನಿಸದ ಹಿನ್ನೆಲೆಯಲ್ಲಿ ಐಆರ್ ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಎಂ.‌ನಾರಾಯಣ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net