ಶ್ರೀಮಂತ ಪರಂಪರೆ ಹೊಂದಿದ ಕರುನಾಡು

ಹರಪನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿದರು. ಸಾಹಿತಿ ಇಸ್ಮಾಯಿಲ್ ಎಲಿಗಾರ್, ಪ್ರಾಚಾರ್ಯ ಎಂ.ಮುಮ್ತಾಜ್, ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಶಿಕ್ಷಕರಾದ ಎಸ್.ವಿಠೋಬ, ಬಿ.ಜಯಮಾಲತೇಶ್, ಬಿ.ಎಂ.ವಿಶ್ವನಾಥಯ್ಯ, ಲತಾ ರಾಥೋಡ್, ಪಂಪಾನಾಯ್ಕ, ದೇವರಾಜ, ಎ.ಲಕ್ಯಾನಾಯ್ಕ ಇತರರಿದ್ದರು.

Published on

ಹರಪನಹಳ್ಳಿ: ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡವು ಪ್ರಮುಖ ಭಾಷೆಯಾಗಿದೆ ಎಂದು ಬಿಇಒ ಎಚ್.ಲೇಪಾಕ್ಷಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ದಿ.ಕಂಚಿಕೆರೆ ಬಿದ್ರಿ ಸಿದ್ದಪ್ಪ ವೀರಮ್ಮ ಸ್ಮಾರಕ ಹಾಗೂ ದಿ. ಎಚ್.ಕೊಟ್ರಪ್ಪ ಬಸಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪದ್ಬರಿತವಾದ ಕರ್ನಾಟಕ ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಹಚ್ಚ ಹಸಿರಿನಿಂದ ಹೊದಿಕೆಯಾದ ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂಧರ್ಯದಿಂದ ಕೂಡಿದೆ. ಪ್ರಾಚೀನ ದೇವಾಲಯಗಳ ಭವ್ಯ ಇತಿಹಾಸ ಹೊಂದಿದೆ. ಕಾಯಕನಿಷ್ಠೆಯನ್ನು ಹೊಂದಿದ್ದ ಬಸವಣ್ಣ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ ಅವರಂಥ ಶರಣರು ನೇರ ನಿಷ್ಠೂರ ಮಾತುಗಳಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಗೆ ಧಕ್ಕೆಯಾಗಿದೆ. ಮೂಲ ಕನ್ನಡದ ಪದಗಳು ಬದಲಾವಣೆಯಾಗಿ ಇಂಗ್ಲೀಷ್ ಆವರಿಸಿದೆ. ಪ್ರತಿ 40 ಕಿಮಿಗೆ ಭಾಷೆ ಹಾಗೂ ಸಂಸ್ಕೃತಿ ಬದಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net