

ಕುಂಬಳೆ: ದೇಲಂತೊಟ್ಟು ಬಜೆ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪೋತ್ಸವದ ಸಮಾರೋಪದ ಧಾರ್ಮಿಕ ಸಭಾ ಕಾರ್ಯಕ್ರಮವು ಡಿ.1ರಂದು ಭಾನುವಾರ ಶ್ರೀಕ್ಷೇತ್ರದಲ್ಲಿ ನಡೆಯಿತು.
ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು ಶ್ರೀಧರ್ ಶೆಟ್ಟಿ ಮುಟ್ಟಂ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ, ಸಾಮಾಜಿಕ ಮುಂದಾಳು ವಸಂತ ಪೈ ಬದಿಯಡ್ಕ, ಹರಿನಾಥ ಭಂಡಾರಿ, ಶಂಕರ್ ನಾರಾಯಣ ಹೊಳ್ಳ, ಗೋಪಾಲಕೃಷ್ಣ ಮಯ್ಯ, ಐತಪ್ಪ ಶೇರಿಗಾರ್, ಶಶಿಕಲಾ ಸುವರ್ಣ, ಆನಂದ ಬಂದ್ಯೋಡ್, ಭುಜಂಗ ಶೆಟ್ಟಿ, ರಾಜೇಶ್ ನಾಯ್ಕ, ಅಮ್ಮ ಪೂಜಾರಿ, ರೇವತಿ ಸುಬ್ಬನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹರಿನಾರಾಯಣ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರಾವ್ಯ ಮಯ್ಯ ಬಜೆ ಪ್ರಾರ್ಥನೆ ಹಾಡಿದರು. ಜಯರಾಮ ಶೆಟ್ಟಿ ಕಳೀಲು ಕಾರ್ಯಕ್ರಮ ನಿರೂಪಿಸಿದರು. ರುಚಿತ್ ಪೂಜಾರಿ ವಂದಿಸಿದರು.