ಬಸ್ ಡಿಕ್ಕಿ ಬೈಕ್ ಸವಾರ ಸಾವು

Bike Accident_1
Published on

ರಾಮನಗರ : ನಗರದ ಐಜೂರು ಸರ್ಕಲ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ.


ಅಜೀಂ (22) ಸಾವಿಗೀಡಾದ ಯುವಕ. ಬೆಂಗಳೂರಿನ ಗೋರಿಪಾಳ್ಯ ನಿವಾಸಿಯಾಗಿದ್ದು ಕಳೆದ 6 ತಿಂಗಳಿಂದ ರಾಮನಗರದ ಯಾರಬ್‌ನಗರದಲ್ಲಿ ವಾಸವಿದ್ದು ರಾಮನಗರದಲ್ಲಿ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ.

ಬುಧವಾರ ಮಧ್ಯಾಹ್ನಬೆಂಗಳೂರು ಕಡೆಯಿಂದ ಬರುತ್ತಿದ್ದ ಈತ ಸಿಗ್ನಲ್ ಜಂಪ್ ಆದ ಮೇಲೆ ವಾಹನಗಳು ಚನ್ನಪಟ್ಟಣದ ಕಡೆ ಸಾಗುವಾಗ ಹಿಂದಿನಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಆತ ಚಲಾಯಿಸುತ್ತಿದ್ದ ಬೈಕಿಗೆ ತಾಗಿದೆ.ಹಿನ್ನಲೆಯಲ್ಲಿ ಈತ ಬೈಕಿನಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಬಸ್‌ನ ಹಿಂಬದಿ ಚಕ್ರ ಆತನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೂಡಲೇ ಸಂಚಾರ ಪೋಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಹ್ಮದ್ ಅಲಾವುದ್ದೀನ್ ಮತ್ತು ಪೋಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಜಿಲಾಸ್ಪ್ಪತ್ರೆ ಶವಾಗಾರಕ್ಕೆ ಸಾಗಿಸಿದರು.


ಘಟನೆಯಿಂದ ಜನರು ಸ್ಥಳದಲ್ಲಿ ಜಮಾವಣೆ ಆದರು ಒಂದಷ್ಟು ಕಾಲ ಟ್ರಾಫಿಕ್ ಸಮಸ್ಯೆ ತಲೆದೋರಿತು. ಪೋಲೀಸರು ಸ್ಥಳದಲ್ಲಿದ್ದ ಜನರನ್ನು ಚದುರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ರಾಮನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net