ಐತ್ತ ಮಾನ್ಯಗೆ ಕರ್ಷಕ ರತ್ನ ರಾಷ್ಟ್ರೀಯ ಪುರಸ್ಕಾರ

New Project (5)
Published on

ಬದಿಯಡ್ಕ: ಪ್ರಗತಿಪರ, ಪ್ರಯೋಗಶೀಲ ಕೃಷಿಕ ಐತ್ತ ಮಾನ್ಯ ಕರ್ಷಕ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಡಿ.15ರಂದು ನವದೆಹಲಿಯಲ್ಲಿ ನಡೆಯುವ ಬಹುಜನ ಸಾಹಿತ್ಯ ಅಕಾಡೆಮಿಯ 17ನೇ ರಾಷ್ಟ್ರೀಯ ಸಮಾವೇಶದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಬಿ.ಎಸ್.ಎ.ಯ ರಾಷ್ಟ್ರೀಯ ಅಧ್ಯಕ್ಷ ನಲ್ಲಾ ರಾಧಾಕೃಷ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐತ್ತ ಮಾನ್ಯ ಕೆನರಾ ಬ್ಯಾಂಕಿನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಮಹಾ ಪ್ರಬಂಧಕರಾಗಿ ಹುದ್ದೆಯಿಂದ ನಿವೃತ್ತರಾದವರು. ಕೃಷಿ ಕಾರ್ಮಿಕ ಕುಟುಂಬದಿಂದ ಬಂದ ಅವರ ಸಾಧನೆಗೆ ಕೇರಳ ರಾಜ್ಯ ಪ್ರಶಸ್ತಿ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಆದರ್ಶ ಕೃಷಿಕ ಪ್ರಶಸ್ತಿ ಲಭಿಸಿದೆ. ಮಾನ್ಯದಲ್ಲಿ ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸಿ ತೆಂಗು, ಕಂಗು, ಭತ್ತ ಕೃಷಿ, ಹೈನುಗಾರಿಕೆಯನ್ನು ಲಾಭದಾಯಕವಾಗಿಸಿದ್ದಾರೆ. ಅವರ ಕೃಷಿ ಕಾಯಕಕ್ಕೆ ಪತ್ನಿ, ಶಿಕ್ಷಕಿ ಲಲಿತಾ ಉಳಿಯ ಬೆಂಬಲ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net