ಸುಗ್ರಾಮವಾದ ಕರ್ಪೆ ಗ್ರಾಮ: ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯ

Btw_Karpe village
Published on

ಬಂಟ್ವಾಳ: ರಸ್ತೆ ಸಂಪರ್ಕ ಇಲ್ಲದೆ ಫಲ್ಗುಣಿ ನದಿ ತೀರದ ದ್ವೀಪದಂತಿದ್ದ ಕರ್ಪೆ ಗ್ರಾಮ ರಸ್ತೆ ಮತ್ತು ಸೇತುವೆ ನಿರ್ಮಿಸಿದ ಪರಿಣಾಮ ಸುಗ್ರಾಮವಾಗಿ ಪರಿವರ್ತನೆಗೊಂಡಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಸಿದ್ಧಕಟ್ಟೆ ಸಮೀಪದ ಕರ್ಪೆ ಗ್ರಾಮದ ಕುಪ್ಪೆಟ್ಟು ಬರ್ಕೆ ಪಂಜುರ್ಲಿ ಮೂಲಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಮತ್ತು ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಪ್ರತಿಷ್ಠಾಮಹೋತ್ಸವ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿದರು. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಧಾರ್ಮಿಕ ಉಪನ್ಯಾಸ ನೀಡಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕುದ್ರೋಳಿ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಶುಭ ಹಾರೈಸಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಬಡಾಜೆ ರವಿಶಂಕರ ಶೆಟ್ಟಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಮೂರ್ತೆದಾರ ಮಹಾ ಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜಾರಂದಾಯ ದೈವಸ್ಥಾನ ಉಪಾಧ್ಯಕ್ಷ ಚಂದ್ರಕಾಂತ್, ಮುಂಬೈ ಸಮಿತಿ ಸಹಸಂಚಾಲಕ ಲಕ್ಷ್ಮೀಶ್ ಸುಜಿತ್ ಪೂಜಾರಿ, ಕುಪ್ಪೆಟ್ಟು ಸೇವಾ ಟ್ರಸ್ಟಿ ಹರೀಶ ಸನಿಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಹೊರೆಕಾಣಿಕೆ ಸಮಿತಿ ಸಂಚಾಲಕ ದೇವಪ್ಪ ಕರ್ಕೇರ ನೆಕ್ಕರೆಗುಳಿ, ಪ್ರಮುಖರಾದ ಜಗದೀಶ್ ಕೊಯಿಲ, ರವೀಂದ್ರ ಪೂಜಾರಿ, ರಂಜನಿ ದಿವಾಕರ್ ಮತ್ತಿತರರು ಇದ್ದರು.

ಪ್ರಚಾರ ಸಮಿತಿ ಸಂಚಾಲಕ ದಿನೇಶ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಪೂಜಾರಿ ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಸಮಸ್ತ ಹಿಂದು ಸಮಾಜ ವಿವಿಧ ಜಾತಿ, ಪಂಗಡಗಳ ಭೇದವಿಲ್ಲದೆ ಸಂಘಟಿತರಾದಾಗ ದೇಶ ಬಲಿಷ್ಠವಾಗುತ್ತದೆ. ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net