ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ - 2024ನೇ ಸಾಲಿನ ಪ್ರಶಸ್ತಿಗಳು ಪ್ರಕಟ

Kannada Bhavana
Published on

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿಗಳು ಪ್ರಕಟಗೊಂಡಿದ್ದು, 2024ನೇ ಸಾಲಿನಲ್ಲಿ ಐವರು ಸಾಹಿತಿಗಳು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಾಮರಾಜನಗರದ ಡಾ.ಎಂ.ಬಸವಣ್ಣ, ಬೆಂಗಳೂರಿನ ಶೂದ್ರ ಶ್ರೀನಿವಾಸ್ ಮತ್ತು ಪ್ರತಿಭಾ ನಂದಕುಮಾರ್, ಕಲಬುರಗಿಯ ಡಾ. ಡಿ.ಬಿ.ನಾಯಕ್ ಹಾಗೂ ಮುಂಬಯಿಯ ಡಾ.ವಿಶ್ವನಾಥ್ ಕಾರ್ನಾಡ್ ಅವರನ್ನು ಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

2024ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಚಿಕ್ಕಮಗಳೂರಿನ ಡಾ. ಬಿ.ಎಂ. ಪುಟ್ಟಯ್ಯ, ಬೆಂಗಳೂರಿನ ಡಾ.ಕೆ.ವೈ. ನಾರಾಯಣಸ್ವಾಮಿ, ಕೋಲಾರದ ಪದ್ಮಾಲಯ ನಾಗರಾಜ್, ತುಮಕೂರಿನ ಡಾ. ಬಿ.ಯು. ಸುಮಾ, ಶಿವಮೊಗ್ಗದ ಡಾ.ಮಮತಾ ಸಾಗರ, ಉಡುಪಿಯ ಡಾ.ಸಬಿತಾ ಬನ್ನಾಡಿ, ಬಳ್ಳಾರಿಯ ಅಬ್ದುಲ್ ಹೈ ತೋರಣಗಲ್, ಅಕ್ಕಲಕೋಟೆಯ ಡಾ. ಗುರುಲಿಂಗಪ್ಪ ದಬಾಲೆ, ಉತ್ತರ ಕನ್ನಡದ ಡಾ.ಎಚ್.ಎಸ್.ಅನುಪಮಾ ಹಾಗೂ ರಾಯಚೂರಿನ ಡಾ.ಅಮರೇಶ್ ಯತಗಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net