

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2022, 2023 ಹಾಗೂ 2024ನೇ ಸಾಲಿನ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಸೇರಿ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟಗೊಂಡಿವೆ.
2022-23ನೇ ಸಾಲಿನ ಗೌರವ ಪ್ರಶಸ್ತಿಗೆ ಕಲಾವಿದೆ ಉಮಾಶ್ರೀ, 2023-24ನೇ ಸಾಲಿಗೆ ವಿಮರ್ಶಕ ಎಚ್.ಎಸ್. ಶಿವಪ್ರಕಾಶ್ ಹಾಗೂ 2024-25ನೇ ಸಾಲಿಗೆ ಸಾಹಿತಿ ಹಾಗೂ ರಂಗಸಂಘಟಕ ಕೋಟಗಾನಹಳ್ಳಿ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ.
ಗೌರವ ಪ್ರಶಸ್ತಿಯು ತಲಾ 50 ಸಾವಿರ ನಗದು, ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ಹಾಗೂ ದತ್ತಿ ಪ್ರಶಸ್ತಿಯು ತಲಾ 10 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿವೆ. ಮೂರು ಗೌರವ ಪ್ರಶಸ್ತಿಗಳು, 75 ವಾರ್ಷಿಕ ಪ್ರಶಸ್ತಿಗಳು ಹಾಗೂ 15 ದತ್ತಿನಿಧಿ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಸೆಪ್ಟೆಂಬರ್ ತಿಂಗಳ ಮೊದಲ ವಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
2022-23ರ ವಾರ್ಷಿಕ ಪ್ರಶಸ್ತಿ
ಅಚ್ಯುತ್ ಕುಮಾರ್ - ತುಮಕೂರು, ಲಕ್ಷ್ಮೀಪತಿ ಕೋಲಾರ -ಕೋಲಾರ, ರಮೇಶ್ ಪಂಡಿತ್ - ಬೆಂಗಳೂರು, ಆಶಾರಾಣಿ - ಬೆಂಗಳೂರು, ಆಡುಗೋಡಿ ಶ್ರೀನಿವಾಸ್ - ಬೆಂಗಳೂರು, ರಮೇಶ್ ಬೇಗಾರ್ - ಚಿಕ್ಕಮಗಳೂರು, ವೀರಭದ್ರಾಚಾರ್ - ಮಂಡ್ಯ, ಆರ್. ಪ್ರಕಾಶ್ - ಹುಬ್ಬಳ್ಳಿ, ಶಂಕರ ಹಲಗತ್ತಿ - ಧಾರವಾಡ, ಎಲ್.ಎಚ್. ರಂಗನಾಥ್ - ತುಮಕೂರು, ಎಚ್. ಅನುಪಮ (ಅಂಬಿಕಾ) - ಚಿತ್ರದುರ್ಗ, ಬಸವರಾಜ ಮುರುಗೋಡ -ಬೆಳಗಾವಿ, ಬಿ.ಎಂ.ಎಸ್.ಪ್ರಭು - ವಿಜಯನಗರ, ಬೇಲೂರು ರಘುನಂದನ್ - ಹಾಸನ, ಮಂಜುನಾಥ ತಿಮ್ಮಣ್ಣ ಭಟ್ಟ - ಉತ್ತರ ಕನ್ನಡ, ಕೆ.ಎಂ. ಕೃಷ್ಣಮೂರ್ತಿ- ದೊಡ್ಡಬಳ್ಳಾಪುರ, ಅನಿಲ್ ಕುಮಾರ್ - ಬೆಂಗಳೂರು, ಗ್ಯಾರಂಟಿ ರಾಮಣ್ಣ - ಹಾಸನ, ನೂರ್ ಅಹಮ್ಮದ್ ಶೇಖ್ - ಮೈಸೂರು, ಕೊಟ್ರಯ್ಯ ಹಿರೇಮಠ -ಕೊಪ್ಪಳ, ಗಂಗಮ್ಮಅರೇರ - ಬಾಗಲಕೋಟೆ, ಎನ್.ಎಚ್. ಶಿವಕುಮಾರ್ -ತುಮಕೂರು, ಎಸ್.ಎ.ಖಾನ್ - ತುಮಕೂರು, ನಂದಿತ ಯಾದವ್ - ಮುಂಬೈ, ಗುರಯ್ಯ ಸ್ವಾಮಿ -ಕೊಪ್ಪಳ.
2023-24ರ ವಾರ್ಷಿಕ ಪ್ರಶಸ್ತಿ
ಬಿ.ಸುರೇಶ್- ಬೆಂಗಳೂರು, ಮಯ ಬ್ರಹ್ಮಾಚಾರ್ -ತುಮಕುರು, ಜೆರ‌್ರಿ ಅನಂತರಾಮ್ -ಬೆಂಗಳೂರು, ರಜನಿ ಗರುಡ -ಧಾರವಾಡ, ನೀಲಗುಂದ ಬಸವನಗೌಡ -ದಾವಣಗೆರೆ, ಮುರಡಯ್ಯ -ಬೆಂಗಳೂರು, ಯ. ಮೃತ್ಯುಂಜಯ -ರಾಮನಗರ, ಪವಿತ್ರಾ - ಪಾಂಡಿಚೇರಿ, ಎಸ್.ಎನ್. ಸತ್ಯನಾರಾಯಣ - ತುಮಕೂರು, ಮಹಾದೇವ ವೆಂಕಪ್ಪ ಕಂಬಾಗಿ - ವಿಜಯಪುರ, ಕೆ. ಹುಸೇನ್ ಸಾಬ್ - ಕುಷ್ಟಗಿ, ಪ್ರಸಾದ್ ಕುಂದೂರು -ಮೈಸೂರು, ಕೆ.ಜಿ.ಮಹಾಬಲೇಶ್ವರ್ - ಶಿವಮೊಗ್ಗ, ದೇವರಾಜ್ ದೇವನಹಳ್ಳಿ -ಬೆಂಗಳೂರು, ವೆಂಕಟೇಶ್ (ಹಾಪ್‌ಕಾಮ್) - ಬೆಂಗಳೂರು, ಸುರೇಶ್ ರಾಮಚಂದ್ರ - ಉತ್ತರ ಕನ್ನಡ, ಗ.ನ.ಅಶ್ವತ್ -ಚಿಕ್ಕಬಳ್ಳಾಪುರ, ನಾಗರಾಜ ಶಿವರುದ್ರಪ್ಪ ಕಮ್ಮಾರ -ಬೆಳಗಾವಿ, ಚಿಕ್ಕ ಹನುಮಂತಯ್ಯ - ತುಮಕೂರು, ಮಂಜುನಾಥ ಸಂಗನಾಳ -ಬಾಗಲಕೋಟೆ, ಎಂ.ಎ. ಜನಾರ್ದನ್ - ಬೆಂಗಳೂರು, ಶೋಭಾ ರಾಘವೇಂದ್ರ - ಗದಗ, ಆರ್.ಸಿ.ಉಮಶಂಕರ್ -ಬೆಂಗಳೂರು ಗ್ರಾಮಾಂತರ, ಬಸವರಾಜ ಯಮನಪ್ಪ ಮಣ್ಣೂರ - ವಿಜಯಪುರ, ರಾಜಗುರು ಹೊಸಕೋಟೆ -ಬೆಂಗಳೂರು.
2024-25ರ ವಾರ್ಷಿಕ ಪ್ರಶಸ್ತಿ
ಪ್ರಕಾಶ್ ರಾಜ್ -ಚೆನೈ, ಸಂಚಯ ಗಣೇಶ್- ಬೆಂಗಳೂರು, ಆರ್. ಶ್ರೀನಾಥ್ - ಬೆಂಗಳೂರು, ಎಚ್.ಎನ್.ದ್ಯಾಮೇಶ್ - ಚಿತ್ರದುರ್ಗ, ತೋಟಪ್ಪ ಕಾಮನೂರು - ಕೊಪ್ಪಳ, ಚಂದ್ರಶೇಖರ್ ಹೊನ್ನಾಳಿ- ಶಿವಮೊಗ್ಗ, ಕೆ.ಪಿ.ಅಶ್ವಥ್ ನಾರಾಯಣ - ತುಮಕೂರು, ಅಬ್ರಾಹಿಂ ಡಿ. ಸಿಲ್ವಾ - ಚಾಮರಾಜನಗರ , ಸಿದ್ದಪ್ಪ ರೊಟ್ಟಿ - ಹಾವೇರಿ, ರಾಯಪ್ಪ ಅನಂತಕಲ್ -ರಾಯಚೂರು, ವಸಂತ್ ಅಮೀನ್ - ಮಂಗಳೂರು, ಚಂದ್ರಶೇಖರ ವಸ್ತ್ರದ - ಗದಗ, ಎ. ಮುನಿನಾರಾಯಣ - ಕೋಲಾರ, ಚಂದ್ರಶೇಖರ ಆಚಾರ್ - ಚಾಮರಾಜನಗರ, ಸಿದ್ಧರಾಜು -ರಾಮನಗರ, ಜಿ. ಮಲ್ಲಿಕಾರ್ಜುನ - ಬೆಂಗಳೂರು, ಬಿ.ಎಸ್.ವಿದ್ಯಾರಣ್ಯ -ಮೈಸೂರು, ಅಪ್ಪಣ್ಣ ರಾಮದುರ್ಗ - ಬೆಳಗಾವಿ, ಶಶಿಧರ್ -ಚಿಕ್ಕಮಗಳೂರು, ಮಾಲರಾಣಿ ಬೆಳವಣಕಿ -ಹುಬ್ಬಳ್ಳಿ, ರೇಣುಕಾ ಬಾವಳ್ಳಿ - ಬಳ್ಳಾರಿ, ರಂಗಸ್ವಾಮಿ - ಬೆಂಗಳೂರು ಗ್ರಾಮಾಂತರ, ಗಿರಿಜಾ ಸಿದ್ಧಿ - ಉತ್ತರ ಕನ್ನಡ, ಕೋಟೆ ಅನಂತು -ಬೆಂಗಳೂರು, ಚಾಂದಿನಿ (ಲಿಂಗತ್ವ ಅಲ್ಪಸಂಖ್ಯಾತೆ)- ಬೆಂಗಳೂರು,
15 ಮಂದಿಗೆ ದತ್ತಿನಿಧಿ ಪ್ರಶಸ್ತಿ:
ಅಕಾಡೆಮಿಯ ದತ್ತಿನಿಧಿ ಪ್ರಶಸ್ತಿಗೆ 2022, 2023, ಹಾಗೂ 2024ನೇ ಸಾಲಿನಿಂದ 15 ಮಂದಿ ಆಯ್ಕೆಯಾಗಿದ್ದು, ಈ ಪ್ರಶಸ್ತಿಗಳು ತಲಾ 10 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ ಹೊಂದಿವೆ. ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಉಡುಪಿಯ ಲಕ್ಷ್ಮಣ ಸುವರ್ಣ, ಬೀದರ್‌ನ ವಿರೂಪಾಕ್ಷಯ್ಯ ಸ್ವಾಮಿ, ಹುಬ್ಬಳ್ಳಿಯ ಚನ್ನಬಸಪ್ಪ ಶಿವಪ್ಪ ಕಾಳೆ. ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ಬೆಂಗಳೂರಿನ ಬಲರಾಮ, ತುಮಕೂರಿನ ಹೇಮಾ ಮಾಲಿನಿ, ಹುಬ್ಬಳ್ಳಿಯ ನಂದರಾಣಿ ಕೋಲ್ಕತ್ತ. ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ’ಕ್ಕೆ ಮಂಡ್ಯದ ಟಿ. ತಿಮ್ಮೇಶ್, ಬೆಂಗಳೂರಿನ ರೇವಣ್ಣ, ಮಂಡ್ಯದ ಬಿ.ಎಸ್. ಲಕ್ಷ್ಮಯ್ಯ. ‘ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ’ಕ್ಕೆ ಆಂಧ್ರಪ್ರದೇಶದ ನರಸಿಂಹ ಪ್ರಸಾದ್, ಬೆಂಗಳೂರಿನ ಬಿ. ರುದ್ರೇಶ್, ಕಲಬುರಗಿಯ ಸಿದ್ಧಲಿಂಗಸ್ವಾಮಿ. ‘ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ’ಕ್ಕೆ ಯಾದಗಿರಿಯ ಶಂಕರ ಜಿ. ಹಿಪ್ಪರಗಿ, ಕೋಲಾರದ ಫ್ರೋರಾ ಅಚ್ಯುತ್ ಮತ್ತು ಬೆಂಗಳೂರಿನ ಎಚ್.ಬಿ. ಶಿವಲಿಂಗಮೂರ್ತಿ ಆಯ್ಕೆಯಾಗಿದ್ದಾರೆ.