ವಿವಿಧ ವಾರ್ಷಿಕ ಪ್ರಶಸ್ತಿಗಳು ಪ್ರಕಟ

Ranjani ragavan
Published on

ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2023ನೇ ಸಾಲಿನ ರಾಜ್ಯಮಟ್ಟದ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.

‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಅವರ ‘ಬಹುತ್ವದ ಭಾರತ’ ಕೃತಿ, ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಗೆ ನಟಿ ರಂಜಿನಿ ರಾಘವನ್ ಅವರ ‘ಸ್ವೈಪ್ ರೈಟ್’ ಕೃತಿ, ‘ಪುಸ್ತಕ ರತ್ನ’ ಪ್ರಶಸ್ತಿಗೆ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಮತ್ತು ‘ಮುದ್ರಣ ರತ್ನ’ ಪ್ರಶಸ್ತಿಗೆ ಗೌರಿ ಲ್ಯಾಮಿನೇಟರ್ಸ್‌ ಸಂಸ್ಥೆಯ ಟಂಕಸಾಲಿ ಎಸ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ನಾಲ್ಕೂ ಪ್ರಶಸ್ತಿಗಳು ತಲಾ 10 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಜು.6ರಂದು ಗಾಂಧಿಭವನದ ಬಾಪೂ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸಾಮಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net