

ಸುಳ್ಯ: ಸಂಘಟನೆಯ ಉದ್ದೇಶವೇ ಬಲವರ್ಧನೆ. ಆ ಮುಖಾಂತರ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಮಂಜುಳಾ ಹೇಳಿದರು.
ಗುರುವಾರ ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಪದಾಧಿಕಾರಿಗಳ ಪದಗ್ರಹಣದಲ್ಲಿ ಮಾತನಾಡಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು. ನೂತನ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ ಗಣೇಶ್ ಕುಕ್ಕುದಡಿ, ಖಜಾಂಚಿ ಕುಶಾಂತ್ ಕೊರತ್ಯಡ್ಕ, ಸದಸ್ಯರು ಪದ ಸ್ವೀಕರಿಸಿದರು.
ಗೌರವಾಧ್ಯಕ್ಷ ಈಶ್ವರ್ ವಾರಣಾಶಿ ಉಪಸ್ಥಿತರಿದ್ದರು. ಸುಳ್ಯ ಫೊಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಶಶಿ ಕೊಯಿಂಗೋಡಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಪೂರ್ವಾಧ್ಯಕ್ಷರಾದ ಗಂಗಾಧರ ಮಟ್ಟಿ, ಗಂಗಾಧರ ಕಲ್ಲಪಳ್ಳಿ, ಹಸೈನಾರ್ ಜಯನಗರ ಶುಭ ಹಾರೈಸಿದರು. ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿದರು. ಗಣೇಶ್ ಕುಕ್ಕುದಡಿ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.