ಭಾರತದ ಇತಿಹಾಸ ಸಂಪದ್ಭರಿತ

Untitled design(22)
ಸಿಂಧನೂರಿನ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ಭಾಷೆ ಮತ್ತು ಲಿಪಿಗಳ ಉಗಮ ವಿಕಾಸ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಪ್ರೊ.ದೇವರ ಕೊಂಡಾರೆಡ್ಡಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹನುಮಂತಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಖಾದರ್ ಭಾಷಾ, ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಇದ್ದರು.
Published on

ಸಿಂಧನೂರು: ಭಾರತದ ಲಿಪಿ ಮತ್ತು ಭಾಷೆ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ರಾಜರಲ್ಲಿ ಅಶೋಕ ಸಾಮ್ರಾಟ್‌ನು ಮೊದಲಿಗನು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಪ್ರೊ.ದೇವರ ಕೊಂಡಾರೆಡ್ಡಿ ಹೇಳಿದರು.

ಅಶೋಕ ಶಾಸನಗಳೇ ಪ್ರಾಚೀನ

ನಗರದ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ಇತಿಹಾಸ, ಕನ್ನಡ ಮತ್ತು ಗ್ರಂಥಾಲಯ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಮತ್ತು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ್ ಜಯಂತಿ ಅಂಗವಾಗಿ ಹಮ್ಮಿಕೊಂಡ ಭಾಷೆ ಮತ್ತು ಲಿಪಿಗಳ ಉಗಮ ವಿಕಾಸ ಕುರಿತ ವಿಶೇಷ ಉಪನ್ಯಾಸದಲ್ಲಿ ಶನಿವಾರ ಮಾತನಾಡಿದರು. ಅಶೋಕ ಶಾಸನಗಳೇ ಪ್ರಾಚೀನವಾದವು. ಈ ಶಾಸನಗಳಿಂದಲೇ ಇಂದು ಭಾರತದ ಇತಿಹಾಸವನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದರು.

ಆಧಾರಗಳಿಂದ ಕಟ್ಟಿದ ಚರಿತೆ ಗಟ್ಟಿ

ಭಾರತವು ಸಂಪದ್ಭರಿತ ಇತಿಹಾಸವನ್ನು ಹೊಂದಿದೆ. ಅದನ್ನು ಮೌಖಿಕವಾಗಿ ಕಟ್ಟಬಹುದು. ಆದರೆ ಅದನ್ನು ಪೂರ್ಣಗೊಳಿಸಲು ಆಗುವುದಿಲ್ಲ. ಆಧಾರಗಳಿಂದ ಕಟ್ಟಿದ ಚರಿತೆ ಗಟ್ಟಿಯಾಗಿದು,್ದ ವಾಸ್ತವವನ್ನು ಬಿಂಬಿಸುತ್ತದೆ. ಅಂತಹ ಇತಿಹಾಸ ಸಮಾಜದ ಸ್ವಾಸ್ಥ್ಯವನ್ನು ಬಯಸುತ್ತದೆ ಎಂದು ತಿಳಿಸಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹನುಮಂತಪ್ಪ ಉದ್ಘಾಟಿಸಿ ಮಾತನಾಡಿ, ಚರಿತೆಯು ಕೋಮು ಸೌಹಾರ್ದತೆಯನ್ನು ಪಸರಿಸುವ ನಿಟ್ಟಿನಲ್ಲಿ ಸಂಶೋಧಕರು ಪಯಣಿಸಬೇಕು. ವರ್ತಮಾನದಲ್ಲಿ ಅದನ್ನು ನಂಜು ಹರಡಿಸುವ ಅಗ್ನಿಯಾಗಿಸಿದ್ದಾರೆ. ಅದಕ್ಕೆ ತಂಪಾಗಿಸುವ ನಿಟ್ಟಿನಲ್ಲಿ ಯುವ ಪೀಳಿಗೆ ಸಜ್ಜಾಗಬೇಕೆಂದರು.

ಪ್ರೊ.ಶಿವಯ್ಯ ಎಂ. ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಉಪನ್ಯಾಸಕ ಅಮರೇಶ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಗ್ರಂಥಪಾಲಕ ಯಲ್ಲಪ್ಪ ಗೋನವಾರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಖಾದರ್ ಭಾಷಾ, ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ, ಡಾ.ಬಸವರಾಜ ಪಿ.ನಾಯಕ ಮತ್ತು ದೇಸಾಯಿ, ನಾರಾಯಣ ಬೆಳಗುರ್ಕಿ ವೀರೇಶ ಕನ್ನಾರಿ, ಉಮೇಶ್ ಪಾಟೀಲ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net