ಸಿಪಿಕೆ ಸಂಜೆ ಕಾಲೇಜು ಪ್ರವೇಶಾತಿ ಪ್ರಾರಂಭ

CKP
Published on

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೆಂಗಳೂರು ಸ್ಕೂಲ್ ಆ್ ವಿಷುವಲ್ ಆರ್ಟ್ಸ್‌ನಲ್ಲಿ (ಸಂಜೆ ಕಾಲೇಜು) 2024-25ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ತರಗತಿಗಳು ನಡೆಯಲಿವೆ.

ನಾಲ್ಕು ವರ್ಷಗಳ ಬ್ಯಾಚುಲರ್ ಆ್ ವಿಷುವಲ್ ಆರ್ಟ್ಸ್ (ಬಿವಿಎ) ಪದವಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಚಿತ್ರಕಲೆ, ಗ್ರಾಫಿಕ್ ಕಲೆ, ಶಿಲ್ಪಕಲೆ, ಅನ್ವಯಕಲೆ ಹಾಗೂ ಕಲಾ ಇತಿಹಾಸ ವಿಭಾಗಗಳಲ್ಲಿ ಪದವಿ ಕೊರ್ಸ್‌ಗಳಿಗೆ ಪ್ರವೇಶಾತಿ ಅರ್ಜಿಯನ್ನು ಡಿಡಿಡಿ.ಠಿಛಿಚಿ.ಚ್ಟಠಿ ಮೂಲಕ ಪಡೆಯಬಹುದು.

ವಿವರಗಳಿಗೆ: ಇ ಮೇಲ್ ವಿಳಾಸ ಟ್ಟಜ್ಞ್ಚಿಜಿಚ್ಝಠಿಛಿಚಿ.ಚ್ಟಠಿ ಅಥವಾ ದೂ: 9606719559 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net