ಬಾಗಲಕೋಟೆಯಲ್ಲಿ ನೀರಸ ಪ್ರತಿಕ್ರಿಯೆ !

33
ಸಂಕಷ್ಟದ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ಜೈ ಕರ್ನಾಟಕ ಸಂಘಟನೆ ಕಾರ್ಯಕರ್ತರು ಕಾಲಿ ಕೊಡಗಳನ್ನು ಇಟ್ಟುಕೊಂಡು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬಾಗಲಕೋಟೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಬಂದ್ ಇದಾಗ್ಯೂ ಎಂದಿನಂತೆ ಜನಜೀವನ, ವ್ಯಾಪಾರ ವಹಿವಾಟು ನಡೆದಿತ್ತು. ಅಂಗಡಿ, ಮುಂಗಟ್ಟು, ಶಾಲೆ, ಕಾಲೇಜು, ಸಾರಿಗೆ ಸಂಚಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಬಂದ್‌ಗೆ ಎರಡ್ಮೂರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಸ್ವಲ್ಪಹೊತ್ತು ಪ್ರತಿಭಟನೆ ನಡೆಸಿದರಾದರೂ ಇದರ ಬಿಸಿ ಜನಸಾಮಾನ್ಯರಿಗೆ ತಟ್ಟಲಿಲ್ಲ. ವಿಶೇಷವಾಗಿ ಬಾಗಲಕೋಟೆ ನಗರದಲ್ಲಿ ಚಿತ್ರಿಕರಣ ನಡೆದಿರುವ ದೇಸಾಯಿ ಚಿತ್ರತಂಡ ಮಾತ್ರ ಬೆಳಗಿನ ಹೊತ್ತು ಶೂಟಿಂಗ್ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಶೀವರಾಮೆಗೌಡ ಬಣದ ಕಾರ್ಯಕರ್ತರು ತಮಿಳುನಾಡಿನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಹಾಗೆಯೇ ಜೈ ಕರ್ನಾಟಕ ಸಂಘಟನೆ ಮುಖಂಡರು ಸಹ ಕಾವೇರಿ ನಮ್ಮದು. ನಾವೇ ಕುಡಿಯುವ ನೀರಿಗೆ ಪರದಾಡುತ್ತಿರುವಾಗಿ ನೀರು ಬಿಡುವುದೆಲ್ಲಿ? ನೀರು ಹರಿಸಬಾರದು ಎಂದು ಘೋಷಣೆ ಕೂಗಿದರು. ಕಾಲಿಕೊಡಗಳನ್ನು ಇಟ್ಟುಕೊಂಡು ಸರ್ಕಾರ ವಿರುದ್ಧ ಹರಿಹಾಯ್ದರು.

ನಗರದ ಬಸವೇಶ್ವರ ವೃತ್ತದಲ್ಲಿ ನಟ, ಒರಟ ಪ್ರಶಾಂತ, ಚಿತ್ರದ ನಾಯಕ ಪ್ರವೀಣಕುಮಾರ, ಸಹನಟಿ ಸೃಷ್ಟಿ, ವಿಲನ ಪಾತ್ರದಾರಿ ಆನಂದ ರಂಗ್ರೇಜ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net