22ರಂದು ಕಾರ್ಮಾರು ಕ್ಷೇತ್ರ ದೃಢಕಲಶೋತ್ಸವ : ಎಡನೀರು ಮಠಾಧೀಶ ಸಚ್ಚಿದಾನಂದ ಶ್ರೀ ಉಪಸ್ಥಿತಿ

New Project (4)
Published on

ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ದೃಢಕಲಶ ಉತ್ಸವ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳ ಉಪಸ್ಥಿತಿಯೊಂದಿಗೆ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಏ.22ರಂದು ಜರುಗಲಿದೆ.

21ರಂದು ಸಂಜೆ 5.30ಕ್ಕೆ ಗಣೇಶ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, 6ರಿಂದ ಶುದ್ಧಿ, ವಾಸ್ತು, ರಾಕ್ಷೋಘ್ನ, ವಾಸ್ತು ಬಲಿ, 7.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಜರುಗಲಿದೆ. 22ರಂದು ಬೆಳಗ್ಗೆ 6ರಿಂದ ಗಣಪತಿ ಹವನ, ದೃಢಕಲಶ ಪೂಜೆ, 8.30ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಶ್ರೀಗಳ ಆಗಮನವಾಗಲಿದೆ. 9ಕ್ಕೆ ದೃಢಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ, ಸಂಜೆ 5.30ಕ್ಕೆ ಸತ್ಯನಾರಾಯಣ ಪೂಜೆ, ರಾತ್ರಿ 7ಕ್ಕೆ ಮಹಾಮಂಗಳಾರತಿ ನೆರವೇರಲಿದೆ.

ಆಮಂತ್ರಣ ಬಿಡುಗಡೆ: ದೃಢಕಲಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಪವಿತ್ರಪಾಣಿ ನರಸಿಂಹ ಭಟ್, ಆಡಳಿತ ಮೋಕ್ತೆಸರ ರಾಧಾಕೃಷ್ಣ ರೈ, ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್, ಸುಂದರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್, ರಂಜಿತ್ ಯಾದವ್, ರಾಮ ಕಾರ್ಮಾರು, ಪುರುಷೋತ್ತಮ ಕಾರ್ಮಾರು, ಕೃಷ್ಣಕುಮಾರ್ ಚುಕ್ಕಿನಡ್ಕ, ಶಶಿಕಾಂತ್ ಶೆಟ್ಟಿ ಕಾರ್ಮಾರು, ಪುನೀತ್ ಕಾರ್ಮಾರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net