ಕಾರ್ಮಾರು ಕ್ಷೇತ್ರದ ಪಾಕಶಾಲೆ ಲೋಕಾರ್ಪಣೆ

Bdk_Karmaru
Published on

ಬದಿಯಡ್ಕ: ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸನಿಹದಲ್ಲಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ನೂತನ ಪಾಕಶಾಲೆ ‘ಅನಂತಶ್ರೀ’ ಉದ್ಘಾಟನೆ ಗುರುವಾರ ಜರುಗಿತು.

ಬದಿಯಡ್ಕದ ಉದ್ಯಮಿ ಗೋಪಾಲಕೃಷ್ಣ ಪೈ ಉದ್ಘಾಟಿಸಿದರು. ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಉಮೇಶ್ ನರಿಕಡಪ್ಪು, ಮಹೇಶ್ ವಳಕುಂಜ, ಟ್ರಸ್ಟಿಗಳಾದ ಗೋಪಾಲ ಭಟ್ ಪಿ.ಎಸ್.ಪಟ್ಟಾಜೆ, ರಾಮ ಕಾರ್ಮಾರು, ನವೀನ್ ಚಂದ್ರ ಪಿ.ಕೆ, ನಿವೃತ್ತ ಮುಖ್ಯಶಿಕ್ಷಕ ಮಾನ ಮಾಸ್ತರ್ ಕಾರ್ಮಾರು, ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಯುವಕ ವೃಂದ ಹಾಗೂ ಮಹಿಳಾ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿದರು. ರಾಧಾಕೃಷ್ಣ ರೈ ಕಾರ್ಮಾರು ವಂದಿಸಿದರು. ಗಣಪತಿ ಹವನ, ಬಲಿವಾಡು ಕೂಟ ಹಾಗೂ ಅನ್ನಸಂತರ್ಪಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net