

ಅರಸೀಕೆರೆ ಗ್ರಾಮಾಂತರ: ಕಣಕಟ್ಟೆ ಹೋಬಳಿ ಕಿತ್ತನಕೆರೆ ಗ್ರಾಮದ ಗ್ರಾಮ ದೇವತೆ ಕರಿಯಮ್ಮ ದೇವಿ ರಥೋತ್ಸವ ಶುಕ್ರವಾರ ಭಕ್ತರ ಸಮ್ಮುಖದಲ್ಲಿ ಜರುಗಿತು.
ಶ್ರೀ ಆಂಜನೇಯ ಸ್ವಾಮಿಗೆ 101ಎಡೆ ಸೇವೆಯೊಂದಿಗೆ ಕನ್ನೇರಮ್ಮನವರ ಪೊದೆ ಮುತ್ತಿನ ವಾಹನೋತ್ಸವ, ಗಜವಾಹನೋತ್ಸವ,ಬೇವಿನಸೀರೆ, ಸಿಡಿ ಕಾರ್ಯಕ್ರಮ, ಬೆಳ್ಳಿ ರಥೋತ್ಸವ ಸೇರಿದಂತೆ ವಿವಿಧ ಕಾರ್ಯಗಳು ಜರುಗಿದವು.
ನಂತರ ಅಲಂಕೃತ ರಥದಲ್ಲಿ ಕರಿಯಮ್ಮ ದೇವಿ, ಚೌಡೇಶ್ವರಿ, ದುರ್ಗಾದೇವಿ, ಪ್ಲೇಗಿನಮ್ಮ, ಚಿಕ್ಕಮ್ಮ ದೇವಿಯರೊಂದಿಗೆ ಭಕ್ತರು ರಥವನ್ನು ಎಳೆದರು. ಭಕ್ತರು ಎತ್ತಿನ ಗಾಡಿಗಳಲ್ಲಿ ತಂದಿದ್ದ ಪಾನಕವನ್ನು ದೇವರಿಗೆ ಅರ್ಪಿಸಿ ನಂತರ ಜನರಿಗೆ ವಿತರಿಸಿದರು. ಕಡಲಮಗೆ, ಪಾಳ್ಯ, ದೋಣನಕಟ್ಟೆ, ಮದ್ದರಹಳ್ಳಿ, ಶಂಕರನ ಹಳ್ಳಿ, ಮಾಡಾಳು, ಚೌಡಿಪಾಳ್ಯ, ಮಲ್ಲೇನಹಳ್ಳಿ, ಬೋಮ್ಮಸಮುದ್ರ, ದಿಬ್ಬೊರು , ಹೊಸಹಳ್ಳಿ ಗ್ರಾಮಗಳಿಂದ ಜನರು ಆಗಮಿಸಿದ್ದರು. ನಂತರ ಉಯ್ಯಲೆ ಉತ್ಸವ, ಅದ್ದೂರಿ ಮಣೆವುವಿನ ಜೊತೆಗೆ ಆಕರ್ಷಕ ಮದ್ದು ಗುಂಡಿನ ಪ್ರದರ್ಶನ ನಡೆಯಿತು. ರಾತ್ರಿ ಓಕುಳಿ ಉತ್ಸವದೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಂಡಿತು.