

ಬೆಳ್ತಂಗಡಿ: ರಾಷ್ಟ್ರ ಅಭಿಮಾನವನ್ನು ಹೊಂದಿ ದೇಶವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದು ಭೂಸೇನೆಯ ಮಾಜಿ ಸೈನಿಕ ವಿಕ್ಟರ್ ಕ್ರಾಸ್ತ ಹೇಳಿದರು.
ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ 25ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿರುವ ಪ್ರತಿಯೊಬ್ಬರು ಸೈನಿಕ ತರಬೇತಿಯನ್ನು ಪಡೆದು ದೇಶ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವಂತಾಗಬೇಕು ಎಂದರು.
ಎಸ್‌ಎಫ್‌ನ ಮಾಜಿ ಸೈನಿಕ ಲಕ್ಷ್ಮಣ ಜಿ.ಡಿ ಎನ್‌ಎಸ್‌ಎಸ್‌ನ ದೈನಂದಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ಯುದ್ಧದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಹತೆಪಡೆದು ಅವಕಾಶ ಸಿಕ್ಕಿದರೆ ಗೌರವಯುತ ಸೈನಿಕರಾಗಿ ಕರ್ತವ್ಯ ನಿರ್ವಹಿಸಬಹುದು ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲವಿಷ್ಣು ಪ್ರಕಾಶ್ ಎಂ., ಎನ್ ಎಸ್ ಎಸ್ ಸಹ ಕಾರ್ಯಕ್ರಮ ಅಧಿಕಾರಿ ದೀಕ್ಷಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾ ಅಧಿಕಾರಿ ಶಂಕರ್ ರಾವ್ ಬಿ. ವಂದಿಸಿದರು. ಕುಮಾರಿ ಅನುಕ್ಷಾ ನಿರೂಪಿಸಿದರು.