ದೂರದರ್ಶನ ಕಲಾವಿದೆಯಾಗಿ ಅಯನಾ ವಿ.ರಮಣ್ ಆಯ್ಕೆ

AYANA
ಅಯನಾ ವಿ.ರಮಣ್
Published on

ಮೂಡುಬಿದಿರೆ: ದೂರದರ್ಶನ ಕಲಾವಿದೆಯಾಗಿ ಅಯನಾ ವಿ.ರಮಣ್ ಆಯ್ಕೆಯಾಗಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾರ್ಗದರ್ಶನದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ ಅವರು ಬಿ ಗ್ರೇಡ್ ಮಾನ್ಯತೆ ಪಡೆದಿದ್ದಾರೆ. ಮನೆ- ಮನೆಗೆ ಭರತನಾಟ್ಯ, ವಿಶಿಷ್ಟವಾದ ನಾಟ್ಯಾಯನ ಕಾರ್ಯಕ್ರಮ ದೇಶ- ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಿರುವ ಅಯನಾ ಮೈಸೂರು ವಿವಿಯಲ್ಲಿ ಆಂಗ್ಲ ಭಾಷೆ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಈಕೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಡಾ.ಮೂಕಾಂಬಿಕಾ ಜಿ.ಎಸ್. ಮತ್ತು ಶ್ರೀ ಪುತ್ತಿಗೆ ಮಠದ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕ ಕೆ.ವಿ.ರಮಣ್ ಆಚಾರ್ಯ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net