ಕಾರ್ಗಿಲ್ ವಿಜಯ ದಿನ ಅವಿಸ್ಮರಣೀಯ

ಕಾರ್ಗಿಲ್ ವಿಜಯ ದಿನ ಅವಿಸ್ಮರಣೀಯ
Published on

ಅರಸೀಕೆರೆ: ಭಾರತೀಯ ಸೇನಾ ಇತಿಹಾಸದಲ್ಲಿ ಕಾರ್ಗಿಲ್ ವಿಜಯ ದಿನ ಅವಿಸ್ಮರಣೀಯ ಎಂದು ನಿವೃತ್ತ ಸೈನಿಕ ಹಬ್ಬನಘಟ್ಟ ನವೀನ್ ಕುಮಾರ್ ಹೇಳಿದರು.

ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷದ ಅಂಗವಾಗಿ ಕಾರ್ಗಿಲ್‌ನ ಗಿರಿ ಶಿಖರಗಳ ತಪ್ಪಲಿನಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ವಿಜಯ ಧ್ವಜ ಯಾತ್ರೆ ರಥವನ್ನು ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಬಳಿ ಗುರುವಾರ ಸಂಜೆ ಸ್ವಾಗತಿಸಿ ಮಾತನಾಡಿದರು.

ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನಾ ಯೋಧರು ತಮ್ಮ ಜೀವ ಪಣಕ್ಕಿಟ್ಟು ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದ ಜತೆ ಸೆಣಸಾಟ ನಡೆಸಿ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಇಂತಹ ಐತಿಹಾಸಿಕ ಸಂಗತಿಯನ್ನು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ತಲುಪಿಸುವ ಉದ್ದೇಶದಿಂದ ವಿಜಯ ಧ್ವಜ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಣ್ಣಪುಟ್ಟ ಆಸೆ, ಆಮಿಷಕ್ಕೆ ಬಲಿಯಾಗದೆ ದೇಶ ಬಲಿಷ್ಠಗೊಳಿಸಲು ಸಂಕಲ್ಪ ಮಾಡೋಣ ಎಂದು ಕರೆ ನೀಡದರು.

ಅರಸೀಕೆರೆ ತಾಲೂಕು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಹುಲಿಗೌಡ್ರು, ಮಂಜುನಾಥ್, ಸೋಮಶೇಖರ್, ಮಲ್ಲಿಕಪ್ಪ, ಚಂದ್ರ ನಾಯಕ್, ನಾಗಭೂಷಣ್, ಚಿನ್ನಪ್ಪ , ಜೆಡಿಎಸ್ ಮುಖಂಡ ಬಿ.ಜಿ.ನಿರಂಜನ್, ಜಯದೇವ ಅರಸಿಕೆರೆ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಸೋದರಿ ನಿವೇದಿತಾ ಪ್ರತಿಷ್ಠಾನದ ಹಾಸನ ಜಿಲ್ಲಾ ಸಂಚಾಲಕಿ ಶಾರದಾ ಜವಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net