ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕರಾಟೆ ಪೂರಕ

IMG-20250207-WA0111
ಬೈಲಕುಪ್ಪೆ ಕರಾಟೆ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವನ್ನು ಸಿ.ಎಸ್.ರೇಣುಕಾಸ್ವಾಮಿ ಉದ್ಘಾಟಿಸಿದರು. ಡಾ.ರಾಮಚಂದ್ರ, ಮಹಮ್ಮದ್ ಇಕ್ಬಾಲ್, ಬಿ.ಎನ್. ಸ್ವಸ್ತಿಕ್, ರಘು, ರಜಿನಿ ಇತರರು ಇದ್ದರು.
Published on

ಬೈಲಕುಪ್ಪೆ: ಪ್ರತಿಯೊಬ್ಬ ವಿದ್ಯಾರ್ಥಿಗೂ ಕರಾಟೆ ಅಗತ್ಯವಾಗಿದೆ ಎಂದು ಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ರೇಣುಕಾಸ್ವಾಮಿ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಖಾಸಗಿ ಕಲ್ಯಾಣ ಮಂಟಪದ ಆವರಣದಲ್ಲಿ ಬೈಲಕುಪ್ಪೆ ಕರಾಟೆ ವಿದ್ಯಾಸಂಸ್ಥೆಯಿಂದ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕರಾಟೆ ಪೂರಕವಾಗಿದೆ. ಹೀಗಾಗಿ ಯುವಕ- ಯುವತಿಯರು ಕರಾಟೆ ಅಭ್ಯಾಸ ಮಾಡಬೇಕು ಎಂದರು.

ಪ್ರದರ್ಶನ: ಕಲಿಕಾ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶಿಸಲಾಯಿತು. ಡಾ.ರಾಮಚಂದ್ರ, ಕರಾಟೆ ಶಿಕ್ಷಕರಾದ ಮಹಮದ್ ಇಕ್ಬಾಲ್, ಬಿ.ಎನ್. ಸ್ವಸ್ತಿಕ್, ಬೈಲಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ರಘು, ಗ್ರಾಮಸ್ಥರಾದ ರಜಿನಿ, ಸೈಯದ್ ಇಲ್ಯಾಸ್, ಅಬ್ಜಲ್, ಗಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net