ಮೇ 1ರಂದು ಕಾರಮೊಗರು ಶ್ರೀ ಅಗ್ನಿದುರ್ಗಾ ದೇವಳ ಜಾತ್ರಾ ಮಹೋತ್ಸವ

gopalakrishna
ಗುರುಪುರ ಕಾರಮೊಗರಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವರು.
Published on

ಗುರುಪುರ: ಗುರುಪುರ ಕಾರಮೊಗರಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಮೇ 1ರಂದು ಜಿ.ಟಿ.ವಾಸುದೇವ ಭಟ್ ಮತ್ತು ರಾಜಶೇಖರ ರಾವ್ ಎನ್. ನೇತೃತ್ವದಲ್ಲಿ ಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

ಬೆಳಗ್ಗೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗುರುಪುರ ಜಂಗಮ ಮಠದ ಶ್ರೀ ರುದ್ರಮುನಿ ಸ್ವಾಮಿ ಹಾಗೂ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಡಾಜೆ ರವಿಶಂಕರ ಶೆಟ್ಟಿ ಬಡಾಜೆಗುತ್ತು ಅಧ್ಯಕ್ಷತೆ ವಹಿಸಲಿದ್ದು, ಗುತ್ತುಮನೆತನಗಳ ಯಜಮಾನರು, ಗಡಿಕಾರರು, ಆಡಳಿತ ಮೊಕ್ತೇಸರರು ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಕುಂದಾಪುರ ಗೋಳಿಯಂಗಡಿಯ ಶ್ರೀ ದುರ್ಗಾಪರಮೇಶ್ವರಿ ಚೆಂಡೆ ಬಳಗದಿಂದ ಚೆಂಡೆನಾದ ಹಾಗೂ ಬೆಳಗ್ಗೆ 9ರಿಂದ 11.30ರವರೆಗೆ ಮಂಗಳೂರಿನ ಭಜನಾಮೃತಧಾರ ತಂಡದಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ, ಗಡಿಕಾರ ಡಾ.ರವಿರಾಜ ಶೆಟ್ಟಿ ಕಾರಮೊಗರುಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net