

ವಿಜಯವಾಣಿ ಸುದ್ದಿಜಾಲ ಮಾನ್ವಿ
ಕಪಗಲ್ ಕೆರೆ ಅಭಿವೃದ್ಧಿಯಿಂದ ಕೆರೆಯ ಕೆಳ ಭಾಗದ ರೈತರು ಹೊಲಗಳಿಗೆ ನೀರು ಹರಿಸಿಕೊಂಡಲ್ಲಿ ನೀರಾವರಿಗೆ ಅನುಕೂಲವಾಗಲಿದೆ. ಕೆರೆ ಅಭಿವೃದ್ಧಿ ಪಡಿಸಲು ಕೆರೆಯ ಅಂದಾಜು ಪ್ರತಿ ತಯಾರಿಸುವಂತೆ ಸಣ್ಣ ನೀರಾವರಿ ಇಲಾಖೆ ಸಿಇ ಪ್ರಕಾಶ ಶ್ರೀಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.
ತಾಲೂಕಿನ ಕಪಗಲ್ ಗ್ರಾಮದಲ್ಲಿ ಸೋಮವಾರ ಸಚಿವರು ಕೆರೆ ವೀಕ್ಷಣೆ ನಂತರ ಮಾತನಾಡಿ, ಒಟ್ಟು 94 ಎಕರೆ ಕೆರೆ ಇದ್ದು, 24 ಎಕರೆ ಗೈರಾಣಿ ಭೂಮಿ ಇದೆ. ಪ್ರತಿ ಮಳೆಗಾಲದಲ್ಲಿ ಮತ್ತು ಎಡದಂಡೆ ಕಾಲುವೆ ನೀರು ಹರಿದು ಬರುವುದರಿಂದ ಕೆರೆ ತುಂಬುತ್ತದೆ. ಕೆರೆ ಅಭಿವೃದ್ಧಿ ಮಾಡಿದರೆ 250-300 ಎಕರೆ ಹೊಲ ನೀರಾವರಿ ಮಾಡಬಹುದು.
ಇದನ್ನೂ ಓದಿ: ಜಿಲ್ಲೆಯಲ್ಲಿ ಅಂತರ್ಜಲ ಕೆಳಮಟ್ಟ!
ಕೆರೆ ಅಭಿವೃದ್ಧಿಯಿಂದ ಸುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಗ್ರಾಮದ ಜನರಿಗೆ ನೀರಿನ ಅನುಕೂಲವಾಗಲಿದೆ ಎಂದರು.
ಶಾಸಕ ಹಂಪಯ್ಯನಾಯಕ, ಮಾಜಿ ತಾಪಂ ಅಧ್ಯಕ್ಷ ಚನ್ನಬಸವ ಬೆಟ್ಟದೂರು, ಮುಖಂಡರಾದ ಬುಡ್ಡುಸಾಬ್, ಡಾ. ಯಂಕನಗೌಡ, ಕಪಗಲ್ ಗ್ರಾಪಂ ಅಧ್ಯಕ್ಷ ನಾಗನಗೌಡ, ಕರೆಪ್ಪನಾಯಕ, ಮುಸ್ತಾಫ್ ಸಾಹುಕಾರ, ಗೋವಿಂದರಾಜ ವಕೀಲ, ಸಣ್ಣ ನೀರಾವರಿ ಸಿಇ ಇಲಾಖೆ ಪ್ರಕಾಶ ಶ್ರೀಹರಿ, ಎಇಇ ಈಶ್ವರ, ಲೋಕೋಪಯೋಗಿ ಇಲಾಖೆ ಎಇಇ ರಾಜಕುಮಾರ ಇತರರಿದ್ದರು.