ಕನ್ನಡಿಗರು ಹೃದಯ ಶ್ರೀಮಂತರು

1
ಚಿಕ್ಕಬಳ್ಳಾಪುರ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಧ್ವಜವಂದನೆ ಸಲ್ಲಿಸಿದರು. ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ರವೀಂದ್ರ, ಎಸ್‌ಪಿ ಕುಶಾಲ್ ಚೌಕ್ಸೆ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಾನಪದ ಕಲಾ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತಿತರರು ಇದ್ದರು.
Published on

ಸಚಿವ ಡಾ.ಎಂ.ಸಿ. ಸುಧಾಕರ್ ಬಣ್ಣನೆ ಗಮನ ಸೆಳೆದ ಪಥಸಂಚಲನ, ಸಾಧಕರಿಗೆ ಸನ್ಮಾನ

ಚಿಕ್ಕಬಳ್ಳಾಪುರ : ನಾಡಧ್ವಜಗಳೊಂದಿಗೆ ಸ್ತಬ್ಧಚಿತ್ರಗಳ ಮೆರವಣಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ನೃತ್ಯ ರೂಪಕ ಪ್ರದರ್ಶನ....

ಇವು ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ಸಂಭ್ರಮದ ದೃಶ್ಯಗಳು.

ಧ್ವಜಾರೋಹಣದ ನಂತರ ರಾಜ್ಯೋತ್ಸವದ ಸಂದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಜಗತ್ತಿನ ವಿವಿಧ ಮೂಲೆಗಳಲ್ಲೂ ಕನ್ನಡಿಗರು ವಿಶಿಷ್ಟ ಸಾಧನೆ ತೋರುತ್ತಿದ್ದಾರೆ. ಇದು ಮತ್ತಷ್ಟು ಹೆಚ್ಚಾಗಬೇಕು ಎಂದು ಆಶಿಸಿದರು.

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಕನ್ನಡಿಗರ ಸಾಧನೆ ನೋಡಬಹುದಾಗಿದೆ. ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ. ಜಗತ್ತಿನ ಮೂರನೇ ಅತ್ಯಂತ ಹಳೇ ಭಾಷೆ ಕನ್ನಡ ಎಂಬುದೇ ಹೆಮ್ಮೆವಿಚಾರ ಎಂದರು.

ಜಾತಿ, ಮತ ಮೀರಿ ಅನ್ಯಭಾಷಿಗರನ್ನು ಗೌರವದಿಂದ ನಡೆಸಿಕೊಳ್ಳುವ ಕನ್ನಡಿಗರ ಹೃದಯ ವಂತಿಕೆ ಪ್ರಶಂಸನೀಯ. ಕನ್ನಡ ಭಾಷೆ ವಾತ್ರವಲ್ಲ, ಜೀವದ ಉಸಿರು. ಇದನ್ನು ಕಾಪಾಡಿಕೊಳ್ಳಬೇಕಾಗಿದೆ. ಆಧುನಿಕತೆ, ಜಾಗತೀಕರಣದ ನಡುವೆ ನಗರ ಪ್ರದೇಶಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ದುರದೃಷ್ಟಕರ ಎಂದರು.

ಜಿಲ್ಲೆ ಆಂಧ್ರದ ಗಡಿಯಲ್ಲಿದ್ದು, ಜನಜೀವನದಲ್ಲಿ ತೆಲುಗಿನ ಪ್ರಭಾವವಿದೆ. ಭಾಷೆಗಳು ಬೇರೆಯಾದರೂ ಎಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಭಾಷೆಗಳು ಮತ್ತು ಸಂಸ್ಕೃತಿಗಳ ನಡುವೆ ಸಾಮರಸ್ಯ ಇರಬೇಕು. ಇದರಲ್ಲಿ ಈ ಭಾಗದ ಜಿಲ್ಲೆಯ ಜನರು ವಾದರಿಯಾಗಿದ್ದಾರೆ ಎಂದರು.

ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಮಾತನಾಡಿ, ವಿದ್ಯಾರ್ಥಿಗಳು ನಾಡು-ನುಡಿ, ದೇಶ ವಿದೇಶಗಳ ಮಹತ್ವದ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೂಕ್ತ ಉತ್ತರ ಬರೆದು, ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುತ್ತದೆ. ಈಗಲೂ ಕೆಲವರು ಗೊಂದಲದಿಂದ ಗೋವಿಂದ ಪೈ ಬದಲಿಗೆ ಕುವೆಂಪು ಅವರನ್ನು ರಾಜ್ಯದ ಮೊದಲ ರಾಷ್ಟ್ರಕವಿ ಎಂಬುದಾಗಿ ಭಾವಿಸುತ್ತಿದ್ದಾರೆ. ಇಂತಹ ಲೋಪ ತಿದ್ದಿಕೊಳ್ಳಬೇಕು ಎಂದು ತಿಳಿಸಿದರು.

ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತಿತರರು ಇದ್ದರು.

ರಕ್ಷಣೆಯ ಅಣಕು ಪ್ರದರ್ಶನ : ಎನ್‌ಡಿಆರ್‌ಎ್ ತಂಡವು ಪ್ರಾಕೃತಿಕ ವಿಕೋಪಗಳಲ್ಲಿ ಸಂತ್ರಸ್ತರ ರಕ್ಷಣೆಯ ತಂತ್ರಗಳ ಅಣಕು ಪ್ರದರ್ಶನ ನೀಡಿ ಗಮನ ಸೆಳೆಯಿತು. ಬೆಂಕಿ ಅವಘಡ, ಕಟ್ಟಡ ಕುಸಿತ, ಸಂತ್ರಸ್ತರ ಪತ್ತೆ, ಆಸ್ಪತ್ರೆಗೆ ಸಾಗಿಸುವುದು, ಚಿಕಿತ್ಸೆ ಕೊಡಿಸುವ ವೈಖರಿ ಮೆಚ್ಚುಗೆಗೆ ಪಾತ್ರವಾಯಿತು.

ರಾರಾಜಿಸದ ನಾಡಧ್ವಜ: ಕಾರ್ಯಕ್ರಮದಲ್ಲಿ ನಾಡಧ್ವಜ ಹಾರಲಿಲ್ಲ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ಆರ್. ಲತಾ ರಾಷ್ಟ್ರ ಧ್ವಜಾಹೋರಣ ನೆರವೇರಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಡೊಳ್ಳುಕುಣಿತ ಸೇರಿ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಕನ್ನಡಾಂಬೆಯ ಭಾವಚಿತ್ರ ಇರಿಸಿದ್ದ ಬೆಳ್ಳಿ ರಥದ ಮೆರವಣಿಗೆ ನಡೆಯಿತು. ಸ್ತಬ್ಧಚಿತ್ರಗಳು ಸಾಥ್ ನೀಡಿದವು.

ಆಕರ್ಷಕ ಪಥಸಂಚಲನ

ಧ್ವಜಾರೋಹಣದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಅವರು ತೆರೆದ ವಾಹನದಲ್ಲಿ ತೆರಳಿ ವಿವಿಧ ಪಥ ಸಂಚಲನ ತಂಡಗಳ ಗೌರವವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್, ಜಿಲ್ಲಾ ಸಶಸ ಮೀಸಲು ಪಡೆ, ಗೃಹರಕ್ಷಕ ದಳ, ಅರಣ್ಯ, ಮಹಿಳಾ ಪೊಲೀಸ್, ಭಾರತ್ ಸೇವಾ ದಳ, ವಾಪಸಂದ್ರ ಸರ್ಕಾರಿ ಬಾಲಕಿಯರು, ಭಾರತಿ, ಪೂರ್ಣಪ್ರಜ್ಞಾ, ಬ್ರೈಟ್, ಪಿಪಿಎಚ್‌ಎಸ್, ಗುಡ್ ಶೆರ್ಡ್, ನ್ಯೂಟನ್ ಗ್ರಾಮರ್, ವೆಲಂಗಾಣಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ನೃತ್ಯ ರೂಪಕ

ಚಿತ್ರದುರ್ಗದ ಕೋಟೆ ರಕ್ಷಿಸಿದ ಒನಕೆ ಓಬವ್ವ (ವಾಸವಿ ಪ್ರೌಢಶಾಲೆ), ಪುಣ್ಯಕೋಟಿ ಕಥೆ (ಸೇಂಟ್ ಜೋಸ್ೆ ಕಾನ್ವೆಂಟ್) ನೃತ್ಯ ರೂಪಕಗಳು ಗಮನ ಸೆಳೆದವು. ನಾಡು ನುಡಿಯನ್ನು ಬಿಂಬಿಸುವ ಗಾಯನಕ್ಕೆ ಇಂಡಿಯನ್ ಪಬ್ಲಿಕ್ ಪ್ರೌಢಶಾಲೆ ವಿದ್ಯಾರ್ಥಿಗಳು ನೃತ್ಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net