ವಿದ್ಯಾಭಾರತಿಯಿಂದ ಕನ್ನಡ ತರಬೇತಿ ಕಾರ್ಯಾಗಾರ

hbr (2)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಕನ್ನಡ ತರಬೇತಿ ಕಾರ್ಯಾಗಾರ ವರ್ಧನ-25 ಮುಂಡ್ಕಿನಜೆಡ್ಡು ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಇತ್ತೀಚೆಗೆ ಜರುಗಿತು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಮಾತನಾಡಿ, ಶಿಕ್ಷಕರು ಪ್ರಸ್ತುತ ವಿದ್ಯಾಮಾನಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿ ಆರೋಗ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅನಿವಾರ್ಯ. ಮಾನವ ಭೋಗಿಯಾದರೆ ಸಾಲದು ಯೋಗಿಯಾಗಿ ಉಪಯೋಗಿಯಾಗಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಅಶೋಕ ಸಾಮಂತ್ ಕಾರ್ಯಾಗಾರ ಉದ್ಘಾಟಿಸಿದರು. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ಹಾಲಾಡಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಹರಿಶ್ಚಂದ್ರ ಕೋಟೇಶ್ವರ ತರಬೇತಿ ನೀಡಿದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಧಾಕೃಷ್ಣ ಸಾಮಂತ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಹರಿಶ್ಚಂದ್ರ ಕೋಟೇಶ್ವರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ 13 ಸಂಸ್ಥೆಗಳ 34 ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿದ್ದರು.

ಮುಖ್ಯಶಿಕ್ಷಕ ಚಂದ್ರಶೇಖರಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯ ರಾಜೇಶ್ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ್ ಕುಲಾಲ್ ಉಪಸ್ಥಿತರಿದ್ದರು. ಮುಕ್ತಾ ನಿರೂಪಿಸಿದರು. ಮಹೇಶ್ ಹೈಕಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ರಮ್ಯಾ ಸ್ವಾಗತಿಸಿದರು. ನವೀನ, ಶಾರದಾ, ನಯನಾ, ದಿವ್ಯಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net