ಒಂದು ಗಿಡ ತಾಯಿಯ ಹೆಸರಲ್ಲಿ ನೆಡಿ...

Indrali
Published on

ವಿದ್ಯಾರ್ಥಿಗಳಿಗೆ ರತ್ನಾಕರ ಇಂದ್ರಾಳಿ ಕಿವಿಮಾತು

ಇಂದ್ರಾಳಿ ಪ್ರೌಢಶಾಲೆಯಲ್ಲಿ ಮನಮಹೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ತಾಯಿಯ ಹೆಸರಲ್ಲಿ ಗಿಡವೊಂದನ್ನು ನೆಟ್ಟು, ಪೋಷಿಸಿ ಅದನ್ನು ಮರವಾಗಿ ಬೆಳೆಸಬೇಕು. ಅದೇ ಆದರ್ಶದಿಂದಲೇ ಬಾಳಬೇಕು. ಮುಂದಿನ ಜನಾಂಗಕ್ಕಾಗಿ, ಅವರ ಭವಿಷ್ಯಕ್ಕಾಗಿ ಗಿಡ-ಮರಗಳನ್ನು ಕಾಪಾಡಬೇಕು ಎಂದು ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಕಿವಿಮಾತು ಹೇಳಿದರು.

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅವರಣದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷ-2025ರ ಪ್ರಯುಕ್ತ ಜುಲೈ 3ರಂದು ಆಯೋಜಿಸಿದ್ದ ಒಂದು ಮರ ಅಮ್ಮನ ಹೆಸರಿನಲ್ಲಿ ವಿಷಯಾಧಾರಿತ ವನಮಹೋತ್ಸವವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಭಾರತಿ ಜಿಲ್ಲಾಧ್ಯಕ್ಷ ದಿನೇಶ ಹೆಗ್ಡೆ ಆತ್ರಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ ನಾಯಕ, ವಿವಿಧ ಸಹಕಾರಿ ಸಂಗಳ ಪಾಡುರಂಗ ಕಾಮತ ಎಳ್ಳಾರೆ, ಪ್ರೀತಿ ಪಾಡುರಂಗ ಕಾಮತ, ನಾಗೇಶ ಪ್ರಭು, ಭಾರತಿ ನಾಯಕ, ಇಂದ್ರಾಳಿ ಅಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಧ್ಯಾಪಕಿ ರೇಷ್ಮಾ ಪ್ರಭು, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net